alex Certify
ಕನ್ನಡ ದುನಿಯಾ       Mobile App
       

Kannada Duniya

ಒಬ್ಬಳಿಗಾಗಿ ಹಾರಿತು ವಿಮಾನ

50843082

ಬಸ್ ಹಾಗೂ ರೈಲುಗಳಲ್ಲಿ ಕೆಲವೊಮ್ಮೆ ಕಡಿಮೆ ಸಂಖ್ಯೆಯ ಪ್ರಯಾಣಿಕರಿರುವುದು ಕಾಮನ್. ಒಂದೊಮ್ಮೆ ಬಸ್ ಗಳಲ್ಲಿ ಒಬ್ಬಿಬ್ಬರು ಪ್ರಯಾಣಿಕರಿದ್ದರೆ ಅಂತಹ ಸಂದರ್ಭದಲ್ಲಿ ಸಂಚಾರವನ್ನೇ ರದ್ದುಗೊಳಿಸಿರುವ ಉದಾಹರಣೆಯೂ ಇದೆ.

ಆದರೆ ಚೀನಾದಲ್ಲಿ ಒಬ್ಬಳೇ ಪ್ರಯಾಣಿಕಳಿಗಾಗಿ ವಿಮಾನ ಸಂಚರಿಸಿದೆ. ಜಾಂಗ್ ಎಂಬ ಮಹಿಳೆ ಚೀನಿಯರ ಹೊಸ ವರ್ಷಾಚರಣೆಗಾಗಿ ಕುಟುಂಬ ಸದಸ್ಯರನ್ನು ಕೂಡಿಕೊಳ್ಳಲು ದಕ್ಷಿಣ ಚೀನಾದ ಗುಂಜಾವೋಗೆ ತೆರಳಲು ಟಿಕೇಟ್ ಮಾಡಿಸಿದ್ದಳು.

ಚೀನಾದಲ್ಲಿ ಈಗ ಭಾರೀ ಹಿಮಪಾತವಾಗುತ್ತಿದ್ದು, ಈ ವಿಮಾನದಲ್ಲಿ ಪ್ರಯಾಣಿಸುವ ಇತರೆ ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ತಲುಪಲು ಸಾಧ್ಯವಾಗಿಲ್ಲ. ವಿಮಾನ ನಿಗದಿತ ಸಮಯಕ್ಕಿಂತ 10 ಗಂಟೆ ತಡವಾಗಿ ಹಾರಾಟ ಆರಂಭಿಸಿದರೂ ಜಾಂಗ್ ಬಿಟ್ಟರೆ ವಿಮಾನದಲ್ಲಿ ಮತ್ಯಾವ ಪ್ರಯಾಣಿಕರು ಇರಲಿಲ್ಲ. ಕೊನೆಗೆ ಆಕೆಯೊಬ್ಬಳಿಗಾಗಿ ವಿಮಾನ ಹಾರಾಟ ಆರಂಭಿಸಿದ್ದು, ಜಾಂಗ್ ತಾನೊಬ್ಬಳೇ ವಿಮಾನದಲ್ಲಿರುವ ಚಿತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾಳೆ. ಹಲವಾರು ಮಂದಿ ಇದನ್ನು ಶೇರ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...