alex Certify
ಕನ್ನಡ ದುನಿಯಾ       Mobile App
       

Kannada Duniya

ಐಫೋನ್ ಬಳಕೆದಾರರು ನೀವಾದ್ರೆ ತಪ್ಪದೆ ಓದಿ ಈ ಸುದ್ದಿ

ನೀವು ಐಫೋನ್ ಬಳಕೆದಾರರಾದ್ರೆ ಈಗ್ಲೇ ಎಚ್ಚೆತ್ತುಕೊಳ್ಳಿ. ನಿಮ್ಮ ಐಫೋನ್ ನಲ್ಲಿರೋ ಎಮೋಜಿ ಪ್ರೀತಿಯ ಐಫೋನ್ ನ್ನ ಭೂತವಾಗಿ ಕಾಡುವ ಸಾಧ್ಯತೆಗಳೇ ಹೆಚ್ಚಿವೆ. ಚೀನಾದಲ್ಲಿ ಈಗಾಗ್ಲೇ ಎಮೋಜಿಗಳಿಂದ ಆ್ಯಪಲ್ ನ ಆಪರೇಟಿಂಗ್ ಸಿಸ್ಟಮ್ ಮೇಲೆ ಸಾಕಷ್ಟು ಕೆಟ್ಟ ಪರಿಣಾಮಗಳಾಗ್ತಿವೆ ಅಂತ ಹೇಳಲಾಗ್ತಿದೆ. ವಿಶೇಷವಾಗಿ ಆ್ಯಪಲ್ ಫೋನ್ ಮತ್ತು ಐಪಾಡ್ ಗಳಲ್ಲಿ ಎಮೋಜಿಯಿಂದ ಸಮಸ್ಯೆ ಕಾಣಿಸಿಕೊಳ್ತಿದೆ.

ತೈವಾನ್ ಅನ್ನೋ ಪದ ಅಥವಾ ತೈವಾನ್ ಧ್ವಜದ ಎಮೋಜಿಯನ್ನ ಬಳಸಿದ ಕೂಡಲೇ ಬಗ್ ಒಂದು ಕಾಣಿಸಿಕೊಳ್ಳುತ್ತಿದೆ. ಇದರಿಂದ ಐಫೋನ್ ಹಾಳಾದ ಬಗ್ಗೆ ಅನೇಕ ದೂರುಗಳು ಐಫೋನ್ ಗ್ರಾಹಕರು ಮತ್ತು ಬಳಕೆದಾರರಿಂದ ದಾಖಲಾಗಿವೆ. ಈ ಎಮೋಜಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯೋಕೆ ಈಗ ಆ್ಯಪಲ್ ನ ತಾಂತ್ರಿಕ ತಂತ್ರಜ್ಞರು ಹೆಣಗಾಡ್ತಿದ್ದಾರೆ.

ಚೀನಾ ಮತ್ತು ತೈವಾನ್ ನಡುವಿನ ಆಂತರಿಕ ಸಂಘರ್ಷದಿಂದಾಗಿ ಹೀಗೊಂದು ಐಫೋನ್ ಅಟ್ಯಾಕ್ ನಡೆದಿರಬಹುದು ಅಂತ ಹೇಳಲಾಗ್ತಿದೆ.
ಐಓಎಸ್ 11.3 ಸರಣಿಯ ಫೋನ್ ಗಳು ಮತ್ತು ಐಪಾಡ್ ಗಳಲ್ಲಿ ಈ ಎಮೋಜಿ ಆತಂಕ ಸಷ್ಟಿಸಿದೆ. ಚೀನಾದ ಕೋಟ್ಯಾಂತರ ಗ್ರಾಹಕರು ಈಗಾಗ್ಲೇ ಇದರಿಂದ ತೊಂದರೆಗೆ ಸಿಲುಕಿರುವ ಸಾಧ್ಯತೆ ಇದೆ. ಒಂದು ವೇಳೆ ನಿಮ್ಮ ಐಫೋನ್ 11.3 ವರ್ಷನ್ ನಲ್ಲಿ ರನ್ ಆಗ್ತಿದ್ರೆ ಆದಷ್ಟು ಬೇಗನೆ11.41 ವರ್ಷನ್ ಗೆ ಅಪ್ ಗ್ರೇಡ್ ಮಾಡಿಕೊಳ್ಳಿ ಅಂತ ಐಫೋನ್ ಸೂಚನೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...