alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪಿಜ್ಜಾ ಬಿಕಿನಿಯ ಬೆಲೆ ಕೇಳಿದ್ರೆ ದಂಗಾಗ್ತೀರಾ..!

pizza

ಮೋನೋಕಿನಿಸ್, ಟ್ಯಾಂಕಿನಿಸ್, ವನ್ ಪೀಸ್, ಟೂ ಪೀಸ್ ಬಿಕಿನಿಯನ್ನೆಲ್ಲ ಇನ್ಮುಂದೆ ಮರೆತುಬಿಡಿ. ಈಗೇನಿದ್ರೂ ಸದ್ದು ಮಾಡ್ತಾ ಇರೋದು ಪಿಜ್ಜಾ ಕಿನಿ. ವಿಲ್ಲಾ ಇಟಾಲಿಯನ್ ಕಿಚನ್ ಈ ವಿಶಿಷ್ಟ ಬಿಕಿನಿಯನ್ನು ಡಿಸೈನ್ ಮಾಡಿದೆ.

ಫುಡ್ ಸ್ಟೈಲಿಸ್ಟ್ ಜೆಸ್ಸಿ ಬಿಯರ್ಡನ್ ಅವರ ಜೊತೆಗೆ ಸೇರಿಕೊಂಡು ಬಾಯಲ್ಲಿ ನೀರುರಿಸೋ ಈ ಪಿಜ್ಜಾ ಬಿಕಿನಿಯನ್ನು ತಯಾರಿಸಲಾಗಿದೆ. ಜುಲೈ 5ರಂದು ರಾಷ್ಟ್ರೀಯ ಬಿಕಿನಿ ದಿನವನ್ನು ಆಚರಿಸಲೆಂದೇ ಈ ಸ್ಪೆಷಲ್ ಟೂ ಪೀಸ್ ಅನ್ನು ಸಿದ್ಧಪಡಿಸಲಾಗಿದೆ.

pizza-1

ಇದು ಬಟ್ಟೆಯಲ್ಲ, ನಿಜವಾದ ಪಿಜ್ಜಾದಿಂದ್ಲೇ ತಯಾರಾಗಿರುವ ಬಿಕಿನಿ. ಪಿಜ್ಜಾ ಬಿಕಿನಿಯ ಬೆಲೆ ಎಷ್ಟು ಗೊತ್ತಾ? 10,000 ಡಾಲರ್. ಮನೆಯಲ್ಲೇ ತಯಾರಿಸಿದ ಪಿಜ್ಜಾ ಹಿಟ್ಟು, ಅಪ್ಪಟ ದೇಸೀ ಮೊಸರೆಲ್ಲಾ ಚೀಸ್, ತಾಜಾ ಕ್ಯಾಲಿಫೋರ್ನಿಯಾ ಟೊಮೆಟೋ ಬಳಸಿ ಮಾಡಿದ ಸಾಸ್ ಹಾಗೂ ರುಚಿಕರ ಪೆಪ್ಪರೊನಿ ಇದರಲ್ಲಿದೆ.

ಜುಲೈ 5ರಂದು ಬಿಕಿನಿ ದಿನಾಚರಣೆಗೆ ಸ್ಪೆಷಲ್ ಆಗಿ ಕಾಣಿಸಿಕೊಳ್ಳಬೇಕು ಅನ್ನೋ ಆಸೆ ಇರುವವರು ಪಿಜ್ಜಾ ಬಿಕಿನಿ ಟ್ರೈ ಮಾಡಬಹುದು. ನಿಮ್ಮ ಅಳತೆಗೆ ತಕ್ಕಂತಹ ಫ್ರೆಶ್ ಪಿಜ್ಜಾ ಬಿಕಿನಿಯನ್ನು ತಯಾರಿಸಿಕೊಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...