alex Certify
ಕನ್ನಡ ದುನಿಯಾ       Mobile App
       

Kannada Duniya

ನೀವೂ ಓದಿ ಈ ಅಪರೂಪದ ‘ಧನ್ಯ ಮಿಲನ’ದ ಸ್ಟೋರಿ

ಕ್ಯಾಲಿಫೋರ್ನಿಯಾದ ಯುವ ವೈದ್ಯರೊಬ್ಬರ ಜೀವನದಲ್ಲಿ ಅನಿರೀಕ್ಷಿತವಾದ ಘಟನೆಯೊಂದು ನಡೆದಿದೆ. ಅವರ ಜೀವನದ ಬಹುಮುಖ್ಯ ವ್ಯಕ್ತಿಯೊಬ್ಬರನ್ನು ವೈದ್ಯರು 30 ವರ್ಷಗಳ ಬಳಿಕ ಮತ್ತೆ ಭೇಟಿಯಾಗಿದ್ದಾರೆ.

ಕ್ಯಾಲಿಫೋರ್ನಿಯಾದ ಆಸ್ಪತ್ರೆಯಲ್ಲಿ ಈಗ ವೈದ್ಯರಾಗಿರುವ ಬ್ರ್ಯಾಂಡನ್ ಸೆಮಿನೇಟರ್ ಅವಧಿಗೂ ಮುನ್ನವೇ ಹುಟ್ಟಿದ ಮಗುವಾಗಿದ್ದರು. ಕೇವಲ 29 ತಿಂಗಳಿಗೆ ಅವರು ಜನಿಸಿದ್ದರು. ಆ ಸಮಯಲ್ಲಿ ಬ್ರ್ಯಾಂಡ್ ಬದುಕೋದೇ ತುಂಬಾ ಕಷ್ಟವಾಗಿತ್ತು. ಆ ಸಮಯದಲ್ಲಿ ಮಗುವಿನ ಲಾಲನೆ ಪಾಲನೆ ಮಾಡಿದ್ದು ನರ್ಸ್ ಆಗಿದ್ದ ವಿಲ್ಮಾ ವಾಂಗ್. ವಿಲ್ಮಾ ವಾಂಗ್ ಅವರ ಪಾಲನೆಯಿಂದಾಗಿ ಬದುಕಿದ ಬ್ರ್ಯಾಂಡನ್ 28 ವರ್ಷಗಳ ನಂತರ ಅದೇ ಆಸ್ಪತ್ರೆಗೆ ವೈದ್ಯರಾಗಿ ಇತ್ತೀಚೆಗೆ ಮರಳಿದ್ದಾರೆ.

ಈ ಸಂದರ್ಭದಲ್ಲಿ ವೈದ್ಯರ ಹೆಸರು ಕೇಳ್ತಿದ್ದ ಹಾಗೆ ವಿಲ್ಮಾಗೆ ಅವರಿಗೆ ತಾವು ಪಾಲನೆ ಮಾಡಿದ ಮಗು ಈತ ಇರಬಹುದು ಅನ್ನೋ ಅನುಮಾನ ಶುರುವಾಗಿದೆ. ಅನುಮಾನವನ್ನು ಬಗೆಹರಿಸಿಕೊಳ್ಳೋಕೆ ಅವರು ಬ್ರ್ಯಾಂಡನ್ ಕುಟುಂಬ ಮತ್ತು ಅವರ ಹಿನ್ನಲೆ ಬಗ್ಗೆ ಸಾಲು ಸಾಲು ಪ್ರಶ್ನೆಗಳನ್ನ ಕೇಳಿದ್ದಾರೆ.

ಕೊನೆಗೆ ಬ್ರ್ಯಾಂಡನ್ ಅವರ ತಂದೆಯ ಹೆಸರು ಕೇಳಿದ ಕೂಡಲೇ ವಿಲ್ಮಾಗೆ ಹೃದಯ ತುಂಬಿ ಬಂದಿತ್ತು. ಆನಂತರ ಬ್ರ್ಯಾಂಡನ್ ನೀವು ವಿಲ್ಮಾನ ಅಂತ ಕೇಳಿದ್ದಾರೆ. ಅದಕ್ಕೆ ಅವರು ಹೌದು ಎಂದಿದ್ದಾರೆ. ಹೀಗೆ 30 ವರ್ಷದ ಬಳಿಕ ಇಬ್ಬರು ಮತ್ತೆ ಭೇಟಿಯಾಗಿದ್ದಾರೆ. ಈ ಅಪರೂಪದ ಧನ್ಯ ಮಿಲನದ ಸ್ಟೋರಿ ಈಗ ಎಲ್ಲಾ ಕಡೆಯಲ್ಲೂ ವೈರಲ್ ಆಗಿದ್ದು, ಜನರಿಂದ ಉತ್ತಮ ಪ್ರಶಂಸೆ ಪಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...