alex Certify
ಕನ್ನಡ ದುನಿಯಾ       Mobile App
       

Kannada Duniya

ಶವಪೆಟ್ಟಿಗೆಯಲ್ಲಿ ಮಲಗಿದವರಿಗೆ ಸಿಗುತ್ತೆ ಡಿಸ್ಕೌಂಟ್…!

ಒಂದು ಕಪ್ ಕಾಫಿಗಾಗಿ ಯಾರಾದ್ರೂ ಸಾಯಲು ಇಷ್ಟಪಡ್ತಾರಾ? ಹೌದು ಎನ್ನುತ್ತಾರೆ ಬ್ಯಾಂಕಾಕ್ ಮಂದಿ. ಇಲ್ಲೊಂದು ಡೆತ್ ಕೆಫೆ ಇದೆ. ಸಾವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋದು ಈ ಕಾಫಿ ಹೌಸ್ ನ ಉದ್ದೇಶ.

ಇಲ್ಲಿ ಸರ್ವ್ ಮಾಡುವ ಪಾನೀಯಗಳ ಹೆಸರು ಡೆತ್, ಪೇಯ್ನ್ ಫುಲ್ ಎಂದೆಲ್ಲಾ ಇದೆ. ಸಾವಿನ ಅನುಭವ ಹೇಗಿರುತ್ತೆ ಅನ್ನೋದನ್ನು ಗ್ರಾಹಕರು ಇಲ್ಲಿ ಪಡೆದುಕೊಳ್ಳಬಹುದು. ಹೂಗಳಿಂದ ಅಲಂಕರಿಸಲ್ಪಟ್ಟ ಶವಪೆಟ್ಟಿಗೆಯಲ್ಲಿ ಗ್ರಾಹಕರನ್ನು ಕೆಲವು ನಿಮಿಷಗಳ ಕಾಲ ಮಲಗಿಸಲಾಗುತ್ತದೆ.

ಹೀಗೆ ಮಾಡಿದ್ರೆ ಪಾನೀಯಗಳ ಮೇಲೆ ನಿಮಗೆ ಡಿಸ್ಕೌಂಟ್ ಸಿಗುತ್ತದೆ. ಡೆತ್ ಸ್ಮೂತಿ ಹೆಸರಿನ ಪಾನೀಯ ಸಖತ್ ಫೇಮಸ್. ಇಲ್ಲಿ ಬಂದವರಿಗೆಲ್ಲ ಒಂದು ರೀತಿ ಅಂತ್ಯಸಂಸ್ಕಾರಕ್ಕೆ ಬಂದಂತಹ ಅನುಭವವಾಗುತ್ತದೆ. ಈ ರೀತಿ ಸಾವಿನ ಬಗ್ಗೆ ಜಾಗೃತಿ ಮೂಡಿಸಿದ್ರೆ ದುಃಖ ಮತ್ತು ನೋವನ್ನು ಕಡಿಮೆ ಮಾಡಬಹುದು ಅನ್ನೋದು ಕೆಫೆ ಮಾಲೀಕರ ಅಭಿಪ್ರಾಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...