alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ವೆಗೆ ಬರುವವರ ಮುಂದೆ ಈ ಬೇಡಿಕೆ ಇಟ್ಟಿದ್ದಾಳೆ ವಧು

ಪ್ರತಿಯೊಬ್ಬರು ‌ಮದುವೆಯಾಗುವಾಗ ಯಾರೆಲ್ಲ ಬರಬೇಕು, ಅವರಿಗೆ ಏನೆಲ್ಲ ನೀಡಬೇಕು ಎನ್ನುವ ಬಗ್ಗೆ ‌ಚಿಂತಿಸುತ್ತಾರೆ. ಆದರೆ ಇಲ್ಲೊಬ್ಬರು ಮದುವೆಗೆ ಬರುವಾಗ ಕಡ್ಡಾಯವಾಗಿ 75 ಡಾಲರ್ ಮೌಲ್ಯದ ಗಿಫ್ಟ್ ತನ್ನಿ, ಇಲ್ಲವಾದರೆ ಪ್ರವೇಶವಿಲ್ಲ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ, ತಮ್ಮ ಮದುವೆ ಆಹ್ವಾನ ಪತ್ರಿಕೆಯಲ್ಲಿ ಈ ರೀತಿಯ ಡಿಮ್ಯಾಂಡ್ ಇಟ್ಟಿದೆ‌. ಮದುವೆ ಕಾಂಟ್ರಾಕ್ಟ್ ನೀಡಿದ್ದ, ಸಂಸ್ಥೆಯ ಮೂಲಕ‌ ಸಾಲುಸಾಲು‌ ನಿಯಮಗಳೊಂದಿಗೆ ಇ ಮೇಲ್ ರವಾನೆಯಾಗಿದ್ದು, ಅನೇಕರು ಈ ರೀತಿಯ ಕಟ್ಟಪ್ಪಣೆ ಇರುವ ಮದುವೆಗೆ ಹೋಗಬೇಕೆ ಎನ್ನುವ ಬಗ್ಗೆ ಚರ್ಚಿಸಿದ್ದಾರೆ.

ಮದುವೆ ವ್ಯವಸ್ಥೆ ಮಾಡಿದ್ದ ಯುವತಿ,‌ ನವಜೋಡಿಗಳ‌‌ ಸ್ನೇಹಿತರಿಗೆ, ಸಂಬಂಧಿಗಳಿಗೆ ಮದುವೆ ಆಹ್ವಾನ ಪತ್ರಿಕೆ ಕಳುಹಿಸುವಾಗ, ಸಾಲು ಸಾಲು ತಪ್ಪುಗಳಿಂದ ಮುಜುಗರಕ್ಕೆ ಈಡಾಗಿದ್ದಾರೆ. ಇದರೊಂದಿಗೆ ಮದುವೆಗೆ ಬರುವವರು ಬಿಳಿ ಬಟ್ಟೆ ಧರಿಸುವಂತಿಲ್ಲ, ಇದೇ ರೀತಿಯಲ್ಲಿ ಕೂದಲು ಬಾಚಬೇಕು, ಫೇಸ್ ಬುಕ್ ನಲ್ಲಿ ಫೋಟೋ ಹಾಕುವಂತಿಲ್ಲ ಎನ್ನುವುದರೊಂದಿಗೆ ಕೊನೆಯಲ್ಲಿ ಕನಿಷ್ಠ 75 ಡಾಲರ್ ಗಿಫ್ಟ್ ತಂದರೆ ಮಾತ್ರ ಒಳಗೆ ಪ್ರವೇಶ ಎಂದು ಬರೆದಿದ್ದಾಳೆ.

ಇವೆಲ್ಲಕ್ಕಿಂತ ಮುಖ್ಯವಾಗಿ, ಮದುವೆಗೆ ಆಗಮಿಸುವ ಯಾರೊಬ್ಬರು ವಧುವನ್ನು ಮಾತನಾಡಿಸುವಂತಿಲ್ಲ ಎಂದಿರುವುದು ಚರ್ಚೆಗೆ ಗ್ರಾಸವಾಗಿದ್ದು, ಇಮೇಲ್ ಸ್ವೀಕರಿಸಿದ ಅನೇಕರು ಈ ನಡೆಯನ್ನು ಟೀಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...