alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದಲ್ಲೇ ಅತಿ ಕನಿಷ್ಠ ಶೌಚಾಲಯಗಳಿರುವ ದೇಶ ಯಾವುದು ಗೊತ್ತಾ?

ಇಥಿಯೋಪಿಯಾ ದೇಶವು ವಿಶ್ವದಲ್ಲೇ ಅತಿ ಕಡಿಮೆ ಶೌಚಾಲಯ ಸೌಲಭ್ಯ ಹೊಂದಿರುವ ದೇಶವಾಗಿದೆ. ಆಫ್ರಿಕಾದ ಎರಡನೇ ಅತಿಹೆಚ್ಚು ಜನಸಂಖ್ಯೆಯಿರುವ ಈ ದೇಶದ ಶೇ.93 ಮಂದಿಗೆ ಶೌಚಾಲಯವೇ ಇಲ್ಲ! ಇಲ್ಲಿ ನೈರ್ಮಲ್ಯದ ಕೊರತೆ ಅತಿಯಾಗಿ ಕಾಡುತ್ತಿದೆ ಎಂದು ವಾಟರ್ ಏಯ್ಡ್ ಸಂಸ್ಥೆಯ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿ ಜನರು ಬಯಲು ಶೌಚ ಅಥವಾ ಅಸುರಕ್ಷಿತ ಲ್ಯಾಟ್ರಿನ್ ಬಳಕೆ ಮಾಡುತ್ತಾರೆ. ಇದರಿಂದಾಗಿ ಭೇದಿಯಂತಹ ಕಾಯಿಲೆಗಳು ಹೆಚ್ಚಾಗಿ ಹರಡುತ್ತಿವೆ. ವಿಶ್ವಸಂಸ್ಥೆಯ ವಾರ್ಷಿಕ ವಿಶ್ವ ಶೌಚಾಲಯ ದಿನ ಸಮೀಪಿಸುತ್ತಿರುವಂತೆ ಈ ವರದಿ ಬಿಡುಗಡೆಗೊಂಡಿದೆ.

ಇದರ ಪ್ರಕಾರ, ವಿಶ್ವಾದ್ಯಂತ 2.3 ಶತಕೋಟಿ ಜನರಿಗೆ ಮನೆಯಲ್ಲೇ ಶೌಚಕ್ಕೆ ಹೋಗುವ ಅವಕಾಶವಿಲ್ಲ. ಅಂದರೆ, ಸೂಕ್ತ ಶೌಚಾಲಯವಿಲ್ಲ. ಇವರಲ್ಲಿ 62 ಕೋಟಿ ಶಾಲಾ ಮಕ್ಕಳಾಗಿದ್ದಾರೆ. ಇದು ಆ ಜನರ ಆರೋಗ್ಯ, ಶಿಕ್ಷಣ ಹಾಗೂ ಸುರಕ್ಷತೆಗಷ್ಟೇ ಅಪಾಯವೊಡ್ಡಿಲ್ಲ. ಅವರ ಭವಿಷ್ಯಕ್ಕೇ ಮಾರಕವಾಗಿದೆ ಎಂದು ವಾಟರ್ ಏಯ್ಡ್ ನ ನಿರ್ದೇಶಕ ಸಾವಿಯೋ ಕರ್ವಾಲೋ ಹೇಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...