alex Certify
ಕನ್ನಡ ದುನಿಯಾ       Mobile App
       

Kannada Duniya

ಯಾರದ್ದೋ ಮಗುವಿನ ಕರುಳ ಕೂಗಿಗೆ ಮಿಡಿದ ಆಸ್ಪತ್ರೆಯ ಮಹಿಳಾ ಸಿಬ್ಬಂದಿ

ಕೆಲವೊಂದು ಸಾರಿ ಯಾರೋ ಮಾಡಬೇಕಾದ ಕೆಲಸವನ್ನು ಇನ್ನಾರೋ ಮಾಡಿರ್ತಾರೆ. ಯಾರದ್ದೊ ಜವಾಬ್ದಾರಿಯನ್ನ ಮತ್ತಿನ್ನಾರೊ ತೆಗೆದುಕೊಂಡಿರ್ತಾರೆ. ಆದ್ರೆ ಒಬ್ಬರ ಕಷ್ಟಕ್ಕೆ ನೋವಿಗೆ ಸ್ಪಂದಿಸುವ ಜವಾಬ್ದಾರಿ ತೆಗೆದುಕೊಳ್ಳೋರು ಸಿಗೋದು ತುಂಬಾನೆ ಅಪರೂಪ. ಇಂತಾ ಒಂದು ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ.

ಕೆಲೆಸ್ಟೇ ಅಯಾಲಾ ಅನ್ನೋ ಮಹಿಳೆ ಅರ್ಜೆಂಟೀನಾದ ಆಸ್ಪತ್ರೆಯೊಂದರಲ್ಲಿ ಪೊಲೀಸ್ ಗಾರ್ಡ್ ಆಗಿ ಕೆಲಸ ಮಾಡ್ತಿದ್ದಾರೆ. ಇತ್ತೀಚೆಗೆ ಅಕೆಗೆ ಆಸ್ಪತ್ರೆಯಲ್ಲಿ ಮಗುವೊಂದು ತುಂಬಾನೇ ಅಳುತ್ತಿರುವ ಸದ್ದು ಕೇಳುತ್ತೆ. ಅಲ್ಲಿಗೆ ಹೋಗಿ ನೋಡಿದಾಗ ಗಂಡು ಮಗುವೊಂದು ಹಸಿವಿಂದ ಅಳ್ತಿರೋದನ್ನ ಅಕೆ ಗಮನಿಸಿಸ್ತಾರೆ. ಕೂಡಲೇ ಆ ವಿಚಾರವನ್ನ ಆಸ್ಪತ್ರೆಯ ಸಿಬ್ಬಂದಿ ಗಮನಕ್ಕೂ ತರ್ತಾರೆ.

ಆದ್ರೆ ಆಸ್ಪತ್ರೆ ಸಿಬ್ಬಂದಿ ಇತರೆ ರೋಗಿಗಳ ಶುಶ್ರೂಷೆಯಲ್ಲಿ ಬ್ಯುಸಿ ಇದ್ದ ಕಾರಣ ಈ ಮಗುವನ್ನು ಸರಿಯಾಗಿ ಗಮನಿಸಿರಲಿಲ್ಲ. ಅಯಾಲಾ ಆ ಮಗುವಿನ ಜವಾಬ್ದಾರಿ ತಾನು ತೆಗೆದುಕೊಳ್ಳಲಾ ಅಂತ ಆಸ್ಪತ್ರೆಯ ಸಿಬ್ಬಂದಿಯನ್ನು ಕೇಳಿದಾಗ ಅದಕ್ಕೂ ಅವರು ಪ್ರತಿಕ್ರಿಯಿಸೋದಿಲ್ಲ.

ಇನ್ನು ತಡಮಾಡೋದು ಬೇಡ ಎಂದು ಮಗುವನ್ನು ಕೈಗೆತ್ತಿಕೊಂಡ ಅಯಾಲ ಮಗುವಿಗೆ ಎದೆ ಹಾಲುಣಿಸ್ತಾರೆ. ತನ್ನ ಸಹೋದ್ಯೋಗಿಯ ಮಾತೃಪ್ರೇಮವನ್ನು ಚಿತ್ರೀಕರಿಸಿಕೊಂಡ ಮತ್ತೊಬ್ಬ ಪೊಲೀಸ್ ಅಧಿಕಾರಿ ಅಯಾಲ ವಿಡಿಯೋವನ್ನು ಮೆಚ್ಚುಗೆಯ ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಅಯಲಾ ಸಮಯೋಚಿತ ಕಾರ್ಯಕ್ಕೆ ಈಗ ವಿಶ್ವದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...