alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬೆಕ್ಕಿನ ವಯಸ್ಸು ಕೇಳಿದ್ರೇ ದಂಗಾಗ್ತೀರಿ

cat record

ಒರೆಗಾನ್: ಸಾಕು ಪ್ರಾಣಿಗಳೆಂದರೆ ಕೆಲವರಿಗೆ ಅಚ್ಚುಮೆಚ್ಚು. ತಮ್ಮ ಪ್ರೀತಿಪಾತ್ರ ಬೆಕ್ಕು, ನಾಯಿಗಳನ್ನು ಮಕ್ಕಳಂತೆಯೇ, ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಅಮೆರಿಕದ ಒರೆಗಾನ್ ನಲ್ಲಿ ಮಹಿಳೆಯೊಬ್ಬರು ಸಾಕಿರುವ ಬೆಕ್ಕಿನ ವಯಸ್ಸು ಗಿನ್ನೆಸ್ ದಾಖಲೆಗೆ ಸೇರಿದೆ.

ಬೆಕ್ಕಿನ ವರ್ಷದ ಲೆಕ್ಕದಲ್ಲಿ ಇದರ ವಯಸ್ಸು 121 ವರ್ಷ. ಸಾಮಾನ್ಯ ವರ್ಷದ ಪ್ರಕಾರ 26 ವರ್ಷ. ಇಷ್ಟು ಸುದೀರ್ಘ ಅವಧಿ ಜೀವಿಸಿರುವ ಈ ಬೆಕ್ಕು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ. ಆಶ್ಲೇ ರೀಡ್ ಒಕುರಾ ಎಂಬ ಮಹಿಳೆ 7 ವರ್ಷದ ಕಾರ್ಡ್ ರೋ ಹೆಸರಿನ ಈ ಬೆಕ್ಕನ್ನು ತಂದು ಸಾಕಿದ್ದು, ಅದಕ್ಕೀಗ 26 ವರ್ಷವಾಗಿದೆ. ಮಾತ್ರವಲ್ಲ, ಆಶ್ಲೇ ರೀಡ್ ಒಕುರಾ ಈ ಬೆಕ್ಕಿಗಾಗಿ ಸಾಮಾಜಿಕ ಜಾಲತಾಣಗಳಾದ ಇನ್ ಸ್ಟಾ ಗ್ರಾಂ, ಫೇಸ್ ಬುಕ್, ಸ್ನಾಪ್ ಚಾಟ್ ಗಳಲ್ಲಿ ಖಾತೆ ತೆರೆದಿದ್ದು, ಡೈಲಿ ಅದನ್ನು ಅಪ್ ಡೇಟ್ ಮಾಡುತ್ತಾರೆ. ಪ್ರಪಂಚದ ಹಿರಿಯ ಬೆಕ್ಕು ಎಂಬ ಹಿರಿಮೆಗೆ ಪಾತ್ರವಾಗಿದೆ.

ಕಾರ್ಡ್ ರೋ ತನ್ನ ಆಹಾರವನ್ನು ತಾನೇ ಹುಡುಕಿಕೊಳ್ಳುತ್ತದೆ. ಅದನ್ನು ಕಟ್ಟಿಹಾಕದೇ ಸ್ವತಂತ್ರವಾಗಿ ಬಿಟ್ಟಿದ್ದು, ಸರಾಸರಿ ಜೀವಿತಾವಧಿಗಿಂತ ಈ ಬೆಕ್ಕು ಈಗಾಗಲೇ 10 ವರ್ಷ ಹೆಚ್ಚು ಜೀವಿಸಿದೆ ಎನ್ನುವ ಆಶ್ಲೇ ರೀಡ್ ಒಕುರಾ, ದಾಖಲೆ ಬರೆದ ಬೆಕ್ಕು ತಮ್ಮ ಬಳಿ ಇರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...