alex Certify
ಕನ್ನಡ ದುನಿಯಾ       Mobile App
       

Kannada Duniya

15 ಸೆಕೆಂಡ್ ಚಾರ್ಜ್ ಮಾಡಿದ್ರೆ 2 ಕಿಮೀ ಸಂಚರಿಸುತ್ತೇ ಬಸ್

busಸಾರ್ವಜನಿಕ ಸಾರಿಗೆಯಲ್ಲಿ ಹೊಸ ಕ್ರಾಂತಿ ಮಾಡಲು ಜಿನೆವಾ ಸಜ್ಜಾಗಿದೆ. ಮುಂದಿನ ವರ್ಷ ಅತ್ಯಾಧುನಿಕ ಸ್ಪೆಷಲ್ ಬಸ್ ಗಳನ್ನು ರಸ್ತೆಗಿಳಿಸಲಿದೆ. ಈ ಬಸ್ ಗಳ ವಿಶೇಷತೆ ಅಂದ್ರೆ ಕೇವಲ 15 ಸೆಕೆಂಡ್ ಗಳ ಕಾಲ ಚಾರ್ಜ್ ಮಾಡಿದ್ರೆ ಇವು 2 ಕಿಲೋ ಮೀಟರ್ ಚಲಿಸಬಲ್ಲವು.

ಯುರೋಪ್ ನ ಬಹುತೇಕ ಎಲ್ಲ ನಗರಗಳಲ್ಲಿರುವ ಸಾಮಾನ್ಯ ವಿದ್ಯುತ್ ಟ್ರಾಲಿ ಬಸ್ ಗಳಂತೆ ಇವು ಕಾಣುತ್ತವೆ. ಬಸ್ ನ ಮೇಲ್ಭಾಗದಲ್ಲಿ ಚಾರ್ಜಿಂಗ್ ವ್ಯವಸ್ಥೆ ಮಾಡಲಾಗಿದೆ. 15 ಸೆಕೆಂಡ್ ಗಳ ಚಾರ್ಜಿಂಗ್ ಅಳವಡಿಸಲಾಗಿದೆ. ಪ್ರಯಾಣಿಕ ಬಸ್ ಹತ್ತಿ, ಇಳಿದು ಮಾಡುತ್ತಿದ್ದಂತೆ ಬ್ಯಾಟರಿ ಚಾರ್ಜ್ ಆಗಲಿದ್ದು 600 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.

15 ಸೆಕೆಂಡ್ ಚಾರ್ಜ್ ಆದ್ರೆ ಈ ಬಸ್ 130 ಜನರನ್ನು ಹೊತ್ತು 2 ಕಿಮೀ ಸಂಚರಿಸಬಲ್ಲದು. ಬಸ್ ಟರ್ಮಿನಲ್ ಗಳಲ್ಲಿ 4-5 ನಿಮಿಷಗಳ ಕಾಲ ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡಲಾಗುತ್ತದೆ. ಈ ಬಸ್ ಗಳ ಬಳಕೆಯಿಂದ ಜಿನೆವಾದಲ್ಲಿ 1000 ಟನ್ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ನಿಲ್ಲಲಿದೆ. 2018ರ ವೇಳೆಗೆ ಈ ಅತ್ಯಾಧುನಿಕ ಬಸ್ ಸಂಪೂರ್ಣವಾಗಿ ಕಾರ್ಯಾಚರಣೆಗಿಳಿಯಲಿದೆ. ಪ್ರತಿನಿತ್ಯ 10,000 ಪ್ರಯಾಣಿಕರನ್ನು ಹೊತ್ತೊಯ್ಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...