alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಚಿರತೆ–ಎಮ್ಮೆ ಚುಂಬನದ ವಿಡಿಯೋ

ಕಾಡಿನಲ್ಲಿ ಜೀವ ವೈವಿಧ್ಯಗಳನ್ನು ನೋಡುವುದೇ ಒಂದು ಖುಷಿ. ವನ್ಯಜೀವಿ ಸಂಶೋಧಕರು ಅವುಗಳ ಜೀವನವನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಆಕರ್ಷಕ ಸಂಗತಿಗಳನ್ನು ಬಿಚ್ಚಿಡ್ತಾರೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದ ಸ್ಯಾಬಿ ಸ್ಯಾಂಡ್ ಗೇಮ್ ರಿಸರ್ವ್ ಕಾಡಿನಲ್ಲಿ ಸುಂದರ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಗಂಡು ಚಿರತೆಯೊಂದು ಎಮ್ಮೆಯನ್ನು ಚುಂಬಿಸುತ್ತಿರುವ ದೃಶ್ಯ ಇದರಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಈಗ ವೈರಲ್ ಆಗಿದೆ.

ಕಾಡಿನಲ್ಲಿ ಎಮ್ಮೆ ಹಿಂಡು ಹೋಗುತ್ತಿರುವಾಗ, ಆ ಹಿಂಡಿನ ಜೊತೆ ಇದ್ದ ಕರುವನ್ನು ಬೇಟೆಯಾಡಲು ಚಿರತೆ ಹಿಂಬಾಲಿಸಿಕೊಂಡು ಹೋಗಿದೆ. ಆದ್ರೆ ಏಕಾಂಗಿ ಚಿರತೆಗೆ ದೊಡ್ಡ ಆಕಾರಗಳ ಆಫ್ರಿಕನ್ ಎಮ್ಮೆ ಹಿಂಡಿನಲ್ಲಿ ಕರುವನ್ನು ಬೇಟೆಯಾಡಲು ಅಷ್ಟು ಸುಲಭವಾಗಿಲ್ಲ.

ಚಿರತೆ ಚಾಣಾಕ್ಷತನದಿಂದ ಬೇಟೆಯಾಡಲು ಎಮ್ಮೆಗಳ ಬಳಿ ಮತ್ತಷ್ಟು ಹತ್ತಿರಕ್ಕೆ ಹೋಗುತ್ತೆ. ಆಗ ಎಮ್ಮೆ ಸಿಟ್ಟಿಗೆ ಹೆದರಿ, ಮರವೇರಿ ಕೂರುತ್ತೆ. ಆಗ ಬಂದ ಮತ್ತೊಂದು ಎಮ್ಮೆ ಮರದ ಮೇಲೆ ತನ್ನ ಮುಖ ಎತ್ತುತ್ತದೆ. ಹಾಗೆ ಚಿರತೆ ಕೂಡಾ ತನ್ನ ಬಾಯಿಯನ್ನು ಮುಂದೆ ಚಾಚುತ್ತೆ. ಆ ಕ್ಷಣ ಅವರೆಡು ಚುಂಬಿಸುವಂತೆ ಕಾಣುತ್ತದೆ. ಬೆನೆಟ್ ಮಾತೋಂಸಿ ಕ್ಯಾಮೆರಾದಲ್ಲಿ ಇದನ್ನು ಸೆರೆ ಹಿಡಿಯಲಾಗಿದ್ದು, ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...