alex Certify
ಕನ್ನಡ ದುನಿಯಾ       Mobile App
       

Kannada Duniya

ಒಡತಿಯ ಪ್ರಾಣ ಉಳಿಸಿ ಹೀರೋ ಆಯ್ತು ಶ್ವಾನ…!

ಪ್ರಾಣಿಗಳು ಮನುಷ್ಯನ ಮೇಲೆ ತೋರಿಸೋ ಪ್ರೀತಿ ಯಾವತ್ತಿಗೂ ನಿಷ್ಕಲ್ಮಷ. ಪ್ರಾಣಿಗಳು ತನ್ನನ್ನ ಸಾಕಿದವರ ಮೇಲಿರುವ ಪ್ರೀತಿಗೆ ತಮ್ಮ ಪ್ರಾಣವನ್ನು ಬೇಕಾದ್ರು ಕೊಡುತ್ವೆ. ಅದಕ್ಕೆ ಉತ್ತಮ ಉದಾಹರಣೆಯೊಂದು ಅರಿಜೋನಾದಲ್ಲಿ ಸಿಕ್ಕಿದೆ.

ತನ್ನ ಒಡತಿಯನ್ನ ಪ್ರಾಣಾಪಾಯದಿಂದ ಪಾರು ಮಾಡಿದ ಶ್ವಾನ ಈಗ ಸಾಮಾಜಿಕ ಜಾಲತಾಣದಲ್ಲಿ ತನ್ನ ಸಾಹಸಕ್ಕೆ ಮತ್ತು ಒಡತಿಯನ್ನ ರಕ್ಷಿಸಿದ್ದಕ್ಕೆ ಮೆಚ್ಚುಗೆ ಪಡೀತಿದೆ.
ನಡೆದದ್ದು ಇಷ್ಟೆ.

ಅರಿಜೋನಾದಲ್ಲಿರುವ ಪೌಲಾ ಗಾಡ್ವಿನ್ ಎಂಬ ಮಹಿಳೆ ಒಂದು ವರ್ಷದ ಪ್ರೀತಿಯ ಗೋಲ್ಡನ್ ರಿಟ್ರೇವರ್ ತಳಿಯ ಶ್ವಾನ ಟೋಡ್ ಜೊತೆ ವಾಕಿಂಗ್ ಹೊರಟಿದ್ದರು. ಈ ವೇಳೆ ದಾರಿಯಲ್ಲಿ ವಿಷಕಾರಿ ಱಟೆಲ್ ಹಾವು ಇರೋದನ್ನ ಅವರು ಗಮನಿಸಲಿಲ್ಲ. ಪೌಲಾ ಗಾಡ್ವಿನ್ ಇನ್ನೇನು ಹಾವಿನ ಮೇಲೆ ಕಾಲಿಟ್ಟು ಅದು ಅವರಿಗೆ ಕಚ್ಚಬೇಕು ಅನ್ನುವಷ್ಟರಲ್ಲಿ ಟೋಡ್ ಒಡತಿಯ ರಕ್ಷಣಾ ಕಾರ್ಯ ಶುರುಮಾಡಿಬಿಟ್ಟ. ಹಾವನ್ನು ಕಚ್ಚಿ ಎಳೆದು ಒಡತಿಯನ್ನ ರಕ್ಷಿಸುವ ಹೋರಾಟದಲ್ಲಿ ಗೆದ್ದೇಬಿಟ್ಟ.

ಈ ಹೋರಾಟದಲ್ಲಿ ಆ ಹಾವು ಟೋಡ್ನ ಬಾಯಿಗೆ ಕಚ್ಚಿಬಿಟ್ಟಿತ್ತು. ಪ್ರಾಣ ಉಳಿಸಿದ ಪ್ರೀತಿಯ ಶ್ವಾನವನ್ನು ಕೂಡಲೇ ಗಾಡ್ವಿನ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದರು. ಪ್ರಾಣಾಪಾಯದಿಂದ ಪಾರಾಗಿರೋ ಟೋಡ್ ನಿಧಾನವಾಗಿ ಚೇತರಿಸಿಕೊಳ್ತಿದ್ದಾನೆ. ಟೋಡ್ ನ ಫೊಟೋದೊಂದಿಗೆ ಅವನ ಸಾಹಸದ ಕತೆಯನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಗೌಡ್ವಿನ್. ಹಾಗಾಗಿ ನೆಟ್ಟಿಗರಿಂದಲೂ ಟೋಡ್ ಭಾರಿ ಪ್ರಶಂಸೆಯನ್ನ ಪಡೀತಿದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...