alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರೆಸ್ ಸೈಜ್ ಬಗ್ಗೆ ತಲೆಕೆಡಿಸಿಕೊಳ್ಬೇಡಿ, ಯಾಕೆ ಅಂತಾ ಹೇಳಿದ್ದಾಳೆ ಈಕೆ….

size

ತೀರಾ ಸಣ್ಣಗಿರುವವರಿಗೆ ಸ್ವಲ್ಪ ದಪ್ಪಗಾಗಬೇಕು ಎನಿಸುತ್ತೆ. ಯಾಕಂದ್ರೆ ಅವರ ಸೈಜ್ ಗೆ ತಕ್ಕಂತಹ ಉಡುಪುಗಳೇ ಸಿಗುವುದಿಲ್ಲ. ಇನ್ನು ಜಾಸ್ತಿ ದಪ್ಪಗಿರುವವರಿಗೆ ಡಬಲ್ ಎಕ್ಸೆಲ್ ಸೈಜ್ ನ ಡ್ರೆಸ್ ಕೊಂಡುಕೊಂಡ್ರೂ ಟೈಟ್ ಎನಿಸುತ್ತೆ. ಈ ಸೈಜ್ ಪ್ರಾಬ್ಲಂ ಬಗ್ಗೆ ಇನ್ ಸ್ಟಾಗ್ರಾಮ್ ನಲ್ಲಿ ಮಹಿಳೆಯೊಬ್ಳು ಮಾಡಿರೋ ಪೋಸ್ಟ್ ವೈರಲ್ ಆಗಿದೆ.

ಲೋರಿ ಬ್ರೈನ್ ಎಂಬಾಕೆ ಹೇಳೋ ಪ್ರಕಾರ ನಮ್ಮ ಡ್ರೆಸ್ ಸೈಜ್ ಮುಖ್ಯವಲ್ಲ, ನಾವು ಯಾವ ರೀತಿ ಡ್ರೆಸ್ ಮಾಡಿಕೊಳ್ತೇವೆ ಅನ್ನೋದು ಮುಖ್ಯ. ಎರಡು ಫೋಟೋಗಳನ್ನು ಆಕೆ ಪೋಸ್ಟ್ ಮಾಡಿದ್ದಾಳೆ, ಒಂದು 2012ರಲ್ಲಿ ತೆಗೆದಿದ್ದು, ಇನ್ನೊಂದು 2017ರಲ್ಲಿ. 2012ರಲ್ಲಿ ಸೈಜ್ 12, 2017ರಲ್ಲಿ ಸೈಜ್ 20.

d

ವಿಶೇಷ ಅಂದ್ರೆ ಎರಡೂ ಫೋಟೋದಲ್ಲೂ ಲೋರಿ ಸುಂದರವಾಗೇ ಕಾಣ್ತಿದ್ದಾಳೆ. ನಂಬರ್ ಮುಖ್ಯವಲ್ಲ ಅನ್ನೋದು ಇದಕ್ಕಾಗಿಯೇ. ಹಾಗಾಗಿ ಡ್ರೆಸ್ ಸೈಜ್ ಬದಲಾಯ್ತು ಅಂತಾ ಮೂಡ್ ಕೆಡಿಸಿಕೊಳ್ಳಬೇಡಿ ಅನ್ನೋದು ಅವಳ ಸಲಹೆ. ನೀವು ಡ್ರೆಸ್ ಆಯ್ಕೆ ಮಾಡಿಕೊಂಡ ಸಮಯ ಯಾವುದು ಅನ್ನೋದನ್ನು ಕೂಡ ಗಮನಿಸಬೇಕು.

ಋತುಚಕ್ರದ ಸಮಯದಲ್ಲಾದ್ರೆ ಮಹಿಳೆಯರು ಸಹಜವಾಗಿಯೇ ಸ್ವಲ್ಪ ದಪ್ಪಗೆ ಕಾಣಿಸ್ತಾರೆ. ಆಗ ಒಂದೆರಡು ಸೈಜ್ ದೊಡ್ಡ ಡ್ರೆಸ್ ಬೇಕಾಗಬಹುದು. ಹಾಗಾಗೆ ಬಟ್ಟೆಯ ಗಾತ್ರದ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಲುಕ್ ಮತ್ತು ಫೀಲ್ ಹೇಗಿದೆ ಅನ್ನೋದನ್ನು ಮಾತ್ರ ಗಮನಿಸಿ ಅನ್ನೋದು ಅವಳ ಸಲಹೆ. ಈ ಪೋಸ್ಟ್ ವೈರಲ್ ಆಗಿದ್ದು, ಸಾವಿರಾರು ಲೈಕ್ಸ್ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...