alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಕಪ್ ಇಲ್ಲದೇ ಯುವತಿಯ ಸಿಂಪಲ್ ಮದುವೆ

bride

ಮದುಮಗಳು ಅಂದಾಕ್ಷಣ ಮೈತುಂಬಾ ಆಭರಣ, ಮೇಕಪ್ ಇರಲೇಬೇಕು. ಜೊತೆಗೆ ಡಿಸೈನರ್ ಡ್ರೆಸ್ ಅಥವಾ ಸೀರೆ ಕಾಮನ್. ಮದುವೆ ದಿನ ತುಂಬಾ ಸುಂದರವಾಗಿ ಕಾಣಬೇಕು ಅನ್ನೋ ಕಾರಣಕ್ಕೆ ಎಲ್ಲರೂ ಸಿಂಗಾರ ಮಾಡಿಕೊಳ್ತಾರೆ. ಆದ್ರೆ ಬಾಂಗ್ಲಾದೇಶದಲ್ಲೊಬ್ಳು ಯುವತಿ ಯಾವುದೇ ಆಭರಣ ಧರಿಸದೇ, ಮೇಕಪ್ ಮಾಡಿಕೊಳ್ಳದೇ ಮದುವೆಯಾಗಿದ್ದಾಳೆ.

ಹೆಲ್ತ್ ಕೇರ್ ಕಂಪನಿಯೊಂದರ ಮಾಲೀಕಳಾಗಿರೋ ತಸ್ನಿಮ್ ಜಾರಾಳ ಮದುವೆ ರಿಸೆಫ್ಷನ್ ಢಾಕಾದಲ್ಲಿ ನೆರವೇರಿತ್ತು. ಆಕೆ ವಧು ಅನ್ನೋದನ್ನು ಯಾರೂ ಗುರುತು ಹಿಡಿದಿರಲೇ ಇಲ್ಲ. ಯಾಕಂದ್ರೆ ಒಂದೇ ಒಂದು ಆಭರಣವನ್ನೂ ತಸ್ನಿಮ್ ಧರಿಸಿರಲಿಲ್ಲ. ಮುಖಕ್ಕೆ ಕ್ರೀಮ್, ಪೌಡರ್ ಕೂಡ ಹಚ್ಚದೇ ಸರಳವಾಗಿ ಬಂದಿದ್ಲು.

ಅಜ್ಜಿಯ ಕಾಟನ್ ಸೀರೆ ಉಟ್ಕೊಂಡು ಸರಳವಾಗಿ ಬಂದಿದ್ಲು. ಮನೆಯವರು ಮತ್ತು ಸಂಬಂಧಿಕರೆಲ್ಲ ಇದಕ್ಕೆ ಆಕ್ಷೇಪಿಸಿದ್ರು. ಕೆಲವರಂತೂ ತಸ್ನಿಮ್ ವಧುವಿನಂತೆ ಅಲಂಕರಿಸಿಕೊಂಡಿಲ್ಲ ಅನ್ನೋ ಕಾರಣಕ್ಕೆ ಅವಳ ಜೊತೆಗೆ ಫೋಟೋ ತೆಗೆಸಿಕೊಳ್ಳಲು ನಿರಾಕರಿಸಿದ್ರು. ಈ ವಿಚಾರವನ್ನು ತಸ್ನಿಮ್ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ. ಆತ್ಮವಿಶ್ವಾಸ ಇದ್ರೆ ಆಭರಣ, ಮೇಕಪ್ ಯಾವುದೂ ಬೇಡ ಅನ್ನೋದು ತಸ್ನಿಮ್ ಅಭಿಪ್ರಾಯ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...