alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಟರಿಯಲ್ಲಿ ಈ ಅದೃಷ್ಟವಂತನಿಗೆ ಸಿಕ್ಕಿದ್ದೇನು..?

austrelia

ಮೆಲ್ಬರ್ನ್: ಲಾಟರಿ ಟಿಕೆಟ್ ಕೊಂಡವರಿಗೆ ಸಾಮಾನ್ಯವಾಗಿ ನಗದು, ಇತರೆ ವಸ್ತುಗಳು ಬಹುಮಾನವಾಗಿ ಬರುತ್ತವೆ. ಆದರೆ, ಇಲ್ಲೊಬ್ಬ ಅದೃಷ್ಟಶಾಲಿಗೆ ಬಂದಿದ್ದು, ಐಷಾರಾಮಿ ಸೌಲಭ್ಯಗಳಿರುವ ದ್ವೀಪ. ಹೌದು ದ್ವೀಪವೇ ಈತನಿಗೆ ಬಹುಮಾನವಾಗಿ ಬಂದಿದೆ.

ಮಿಲಿಯನ್ ಡಾಲರ್ ಬೆಲೆಬಾಳುವ ಐಲ್ಯಾಂಡ್ ರೆಸಾರ್ಟ್ ಕೇವಲ 49 ಡಾಲರ್ ಗೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನ ಅದೃಷ್ಟಶಾಲಿ ಜೋಶು ವಾಗೆ ಸಿಕ್ಕಿದೆ. ಕೊಸ್ರೇ ನಾಟಿಲಸ್ ಐಲ್ಯಾಂಡ್ ರೆಸಾರ್ಟ್ ಮಾಲೀಕರಾಗಿರುವ ಡೌಗ್ ಮತ್ತು ಸ್ಯಾಲಿ ಅವರು, ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಐಲ್ಯಾಂಡ್ ತೊರೆದು, ಆಸ್ಟ್ರೇಲಿಯಾದ ನಗರಕ್ಕೆ ವಲಸೆ ಹೋಗಲು ತೀರ್ಮಾನಿಸಿದ್ದು, ಈ ರೆಸಾರ್ಟ್ ದ್ವೀಪವನ್ನು ಯಾರಾದರೂ ಆಸಕ್ತರಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಬಳಿಕ, ಮಾಹಿತಿ ನೀಡಿ ಲಾಟರಿ ಟಿಕೆಟ್ ಗಳನ್ನು ಮಾರಿದ್ದಾರೆ.

1 ಲಾಟರಿಗೆ 49 ಡಾಲರ್ ನಿಗದಿಪಡಿಸಿ, 75,485 ಲಾಟರಿ ಟಿಕೆಟ್ ಗಳನ್ನು 150 ದೇಶಗಳಲ್ಲಿ ಮಾರಾಟ ಮಾಡಿದ್ದಾರೆ. ಜೋಶು ವಾ 3 ಟಿಕೆಟ್ ಗಳನ್ನು ಖರೀದಿಸಿದ್ದು, ಆತನಿಗೆ ದ್ವೀಪ ಬಹುಮಾನವಾಗಿ ದೊರೆತಿದೆ. ಜೋಶುವಾ ಮಾಲೀಕರಿಗೆ ಕೃತಜ್ಞತೆ ಸಲ್ಲಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...