alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುತ್ತದೆ ವೈರಲ್ ಆಗಿರುವ ಪುಟ್ಟ ಪೋರಿಯ ಫೋಟೋ

aubrey-baby-viral- photoಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋ ಎಲ್ಲರ ಮನ ಕಲಕುತ್ತಿದೆ. ಹಾಗೆಂದು ಈ ಫೋಟೋದಲ್ಲಿ ಅಂತಹ ವಿಶೇಷತೆಯೇನಿದೆ ಅಂತೀರಾ. ಅಂತದ್ದೇನೂ ಇಲ್ಲ ನಿಜ ಆದರೆ ಫೋಟೋ ಹಿಂದಿನ ಸ್ಟೋರಿ ಮಾತ್ರ ಕಲ್ಲೆದೆಯವರನ್ನೂ ಕರಗುವಂತೆ ಮಾಡುತ್ತದೆ.

ಫ್ಲೋರಿಡಾದ ಮೂರು ವಾರಗಳ ಈ ಮಗುವಿನ ತಂದೆ 25 ವರ್ಷದ ಹೆಕ್ಟರ್ ಡೇನಿಯಲ್ ತನ್ನ ಪತ್ನಿ ಗರ್ಭಿಣಿಯಾಗಿದ್ದಾಗಲೇ ಹುಟ್ಟಲಿರುವ ಮಗುವಿನ ಬಗ್ಗೆ ಆಪಾರ ಕನಸಿಟ್ಟುಕೊಂಡಿದ್ದ. ಮೋಟಾರ್ ಸೈಕಲ್ ಪ್ರಿಯನಾಗಿದ್ದ ಡೇನಿಯಲ್ ತನ್ನ ಗರ್ಭಿಣಿ ಪತ್ನಿಯನ್ನು ಅದರ ಮೇಲೆ ಕರೆದುಕೊಂಡು ಹೋಗುವಾಗ ಆಪಾರ ಎಚ್ಚರಿಕೆ ವಹಿಸುತ್ತಿದ್ದ.

ದುರಾದೃಷ್ಟವೆಂದರೆ ಮಗು ಹುಟ್ಟುವ ಒಂದು ತಿಂಗಳ ಮೊದಲು ಡೇನಿಯಲ್ ತನ್ನ ಸ್ನೇಹಿತನಿಂದಲೇ ಕೊಲೆಯಾಗಿದ್ದಾನೆ. ಹುಟ್ಟಲಿರುವ ತನ್ನ ಮಗುವಿನ ಮೇಲೆ ಆತ ಹೊಂದಿದ್ದ ಪ್ರೀತಿಯನ್ನು ಅರಿತಿದ್ದ ಪತ್ನಿ, ಆತ ಮೋಟಾರ್ ಸೈಕಲ್ ಓಡಿಸುತ್ತಿರುವಾಗ ಧರಿಸುತ್ತಿದ್ದ ಗ್ಲೌಸ್ ಅನ್ನೇ ಮಗುವನ್ನು ಮಲಗಿಸುತ್ತಿರುವಂತೆ ಇರಿಸಿದ್ದಾಳೆ. ಮಗು ತನ್ನ ತಂದೆಯ ಕೈಗಳ ಮೇಲೆ ಮುಗುಳ್ನಗೆಯಿಂದ ಮಲಗಿರುವಂತೆ ಇರುವ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 75 ಸಾವಿರಕ್ಕೂ ಅಧಿಕ ಮಂದಿ ಇದನ್ನು ಈಗಾಗಲೇ ಶೇರ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...