alex Certify
ಕನ್ನಡ ದುನಿಯಾ       Mobile App
       

Kannada Duniya

64 ವರ್ಷಗಳಿಂದ ಈ ಅಜ್ಜಿ ಕುಡಿಯುತ್ತಿರುವುದೇನು ಅಂತ ತಿಳಿದ್ರೆ ಶಾಕ್ ಆಗ್ತೀರಾ…!

ಪೆಪ್ಸಿ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಮಾರಾಟವಾಗುವ ಸಾಫ್ಟ್ ಡ್ರಿಂಕ್ ಆಗಿದ್ದು, 200ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವ ಹೊಂದಿದೆ. ಪೆಪ್ಸಿ ಬ್ರಾಂಡ್‌ಗೆ ಅದರದ್ದೇ ಆದ ನಿಷ್ಠಾವಂತ ಫ್ಯಾನ್‌ಗಳಿದ್ದಾರೆ. ಆದರೆ ಈ ಅಜ್ಜಿಯಷ್ಟು ನಿಷ್ಠಾವಂತರು ಇನ್ನೊಬ್ಬರು ಸಿಗಲಾರರು.

ನೀವು ನಂಬುತ್ತೀರೋ, ಬಿಡುತ್ತೀರೋ, 77ರ ಹರೆಯದ ಜಾಕಿ ಪೇಜ್ ಎಂಬ ಅಜ್ಜಿ ಕಳೆದ 60 ವರ್ಷಗಳಿಂದ ಪೆಪ್ಸಿ ಬಿಟ್ಟರೆ ಬೇರೇನೂ ಕುಡಿಯುತ್ತಿಲ್ಲವಂತೆ. ಇಂಗ್ಲೆಂಡ್‌ನ ಕಾರ್‌ಶಾಲ್ಟನ್‌ನ ಈ ಅಜ್ಜಿಗೆ ಇಬ್ಬರು ಮೊಮ್ಮಕ್ಕಳಿದ್ದಾರೆ.

ಇವರು ತಮ್ಮ ದಿನ ಆರಂಭಿಸುವುದೇ ಒಂದು ಕ್ಯಾನ್ ಪೆಪ್ಸಿಯೊಂದಿಗೆ, ರಾತ್ರಿ ಮಲಗುವ ಮುನ್ನವೂ ಪೆಪ್ಸಿ ಕುಡಿಯುತ್ತಾರೆ. 1954ರಲ್ಲಿ ಈಕೆ ಮೊದಲ ಬಾರಿಗೆ ಪೆಪ್ಸಿ ಕುಡಿದಾಗ ಅವರಿಗೆ 13 ವಯಸ್ಸು. ಬಾಟಲಿಗಿಂತ ಕ್ಯಾನ್‌ನಿಂದ ಪೆಪ್ಸಿ ಹೀರುವುದೇ ಇವರಿಗೆ ಖುಷಿಯಂತೆ. ಕಳೆದ 64 ವರ್ಷಗಳಲ್ಲಿ ಇವರು ಕುಡಿದ ಪೆಪ್ಸಿ ಕ್ಯಾನ್‌ನ ಸಂಖ್ಯೆ 93,440 ದಾಟಿರಬಹುದಂತೆ.

ಇಷ್ಟಾಗ್ಯೂ, ತಾನು ಪೆಪ್ಸಿಯ ಚಟ ಅಂಟಿಸಿಕೊಂಡಿಲ್ಲ. ಇದು ತನಗೆ ಇಷ್ಟ ಅಷ್ಟೆ. ನನಗೆ ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗಲಿಲ್ಲ ಅಂತಾರೆ ಈ ಅಜ್ಜಿ. ತಮ್ಮ ನಾಯಿಗೂ ಪೆಪ್ಸಿ ಅಂತಾನೇ ಹೆಸರಿಟ್ಟಿದ್ದಾರೆ ಇವರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...