alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಮ್ಮಗನಿಗೆ ಅಜ್ಜಿಯೇ ಬಾಡಿಗೆ ತಾಯಿ…!

ಇದೊಂಥರಾ ವಿಶಿಷ್ಟ ಸ್ಟೋರಿ. ಸೊಸೆಯಾದವಳು ತಾಯಿಯಾಗಲು ಅಸಾಧ್ಯ ಎನ್ನೋದನ್ನು ಅರಿತ 50 ವರ್ಷ ವಯಸ್ಸಿನ ಅತ್ತೆಯೊಬ್ಬಳು ತಾನೇ ಬಾಡಿಗೆ ತಾಯಿಯಾಗಿ ಮಗುವನ್ನು ಹೆತ್ತು ಕೊಡಲು ಮುಂದಾಗಿರುವ ಅಪರೂಪದ ಘಟನೆ.

29 ವರ್ಷದ ಕಾಯ್ಲಾ ಜೋನ್ಸ್ ಎಂಬಾಕೆ 2012 ರಲ್ಲಿ ಮದುವೆಯಾಗುತ್ತಾಳೆ. ಆದರೆ ಆಕೆಗೆ ಗರ್ಭಕೋಶದಲ್ಲಿ ತೊಂದರೆ ಇರುವ ಕಾರಣ ಆಕೆ ತಾಯಿಯಾಗುವುದು ಅಸಾಧ್ಯವಾಗಿತ್ತು. ತಮ್ಮದೇ ಮಗು ಬೇಕೆಂಬ ಆಸೆಯಿರೋದು ಎಲ್ಲರಿಗೂ ಸಹಜವೇ. ಮಕ್ಕಳು ಬಾಡಿಗೆ ತಾಯಿಗಾಗಿ ಅಲೆದಾಡುತ್ತಿರುವುದನ್ನು ಕಂಡ ಅತ್ತೆ ತಾನೇ ಯಾಕೆ ಈ ಕೆಲಸ ಮಾಡಬಾರದು ಅಂದುಕೊಂಡು ಮಕ್ಕಳ ಮುಂದೆ ಪ್ರಸ್ತಾಪಿಸಿದರು.

ಇದನ್ನು ಗಂಭೀರವಾಗಿ ತೆಗೆದುಕೊಂಡ ಮಗ, ಸೊಸೆ ಆಕೆಯನ್ನು ಕರೆದುಕೊಂಡು ತಪಾಸಣೆ ಮಾಡಿದಾಗ ಆಕೆ ಗರ್ಭ ಧರಿಸೋಕೆ ಅರ್ಹಳು ಅನ್ನೋದು ಗೊತ್ತಾಯಿತು. ನಂತರ ಐವಿಎಫ್ ಮೂಲಕ 2017 ಮೇ ನಲ್ಲಿ ಅತ್ತೆ ತನ್ನ ಮೊಮ್ಮಗುವನ್ನು ಗರ್ಭದಲ್ಲಿಟ್ಟು ಜೋಪಾನ ಮಾಡಿದಳು.

ಹೀಗೆ ಕುಟುಂಬದಲ್ಲಿ ಅಥವಾ ನೆಂಟರಿಷ್ಟರಲ್ಲಿ ಯಾರಾದರೂ ಬಾಡಿಗೆ ತಾಯಿಯಾಗುವಂತಿದ್ದರೆ ಅದು ಒಳ್ಳೆಯದೇ. ಯಾಕೆಂದರೆ ಬಾಡಿಗೆ ತಾಯಿ ಹುಡುಕುವುದು ಸುಲಭವೇನಲ್ಲ. ಕುಟುಂಬದಲ್ಲೇ ಯಾರಾದರೂ ಈ ಕೆಲಸ ಮಾಡುವಂತಿದ್ದರೆ ಒಳ್ಳೆಯ ಬಾಂಧವ್ಯವಿರುತ್ತದೆ ಜೊತೆಗೆ ಕಾನೂನಾತ್ಮಕ ತೊಡಕುಗಳೂ ಸಹ ಇರೋದಿಲ್ಲ ಅಂತಾರೆ ಕಾಯ್ಲಾ ಜೋನ್ಸ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...