alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ ಸ್ಟಾ ಗ್ರಾಂ ಸ್ಟಾರ್ ಆಗಿದ್ದಾಳೆ ಪುಟ್ಟ ಬಾಲೆ, ಕಾರಣವೇನು ಗೊತ್ತಾ?

ಇಸ್ರೇಲ್ ಟೆಲ್ ಅವೀವ್ ನ ಮಿಯಾ ಅಫಲೋಗೆ ಐದು ವರ್ಷದ ಹರೆಯ. ಆದರೆ ಈಕೆ ಈಗ ಸಾಮಾಜಿಕ ಜಾಲತಾಣದಲ್ಲಿ ತಾರೆಯಾಗಿದ್ದಾಳೆಂದರೆ ಅಚ್ಚರಿಪಡಲೇಬೇಕು.

ಈ ಬಾಲಕಿ ಅತಿ ಕಡಿಮೆ ಅವಧಿಯಲ್ಲಿ ಇನ್ ಸ್ಟಾ ಗ್ರಾಂ ನಲ್ಲಿ 50 ಸಾವಿರ ಫಾಲೋಯರ್ ಹೊಂದಿದ್ದು, ಅಚ್ಚರಿ ಎಂದರೆ ಆಕೆ ಕೂದಲಿನಿಂದಾಗಿಯೇ ಫೇಮಸ್ ಆಗಿರುವುದು.

ಇಂದು ಸಾಮಾಜಿಕ ಜಾಲತಾಣದಲ್ಲಿ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವುದು ಒಂದು ರೀತಿ ಹುಚ್ಚು ಹವ್ಯಾಸವಾಗುತ್ತಿದೆ. ಇಂಥದ್ದರಲ್ಲಿ ಬಾಲಕಿ ತನ್ನ ಕೂದಲು, ಕೇಶ ವಿನ್ಯಾಸದಿಂದ ಗಮನ ಸೆಳೆದಿದ್ದಾಳೆ. ವಿವಿಧ ಪೋಷಾಕುಗಳಲ್ಲಿ ಮುದ್ದು ಮುದ್ದಾಗಿ ಬಗೆ ಬಗೆಯ ನಿಲುವಂಗಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಆಕೆ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾಳೆ.

ಇದೇ ವೇಳೆ ಇಷ್ಟು ಸಣ್ಣವಳು ಆಟವಾಡಬೇಕಾದ ಸಮಯದಲ್ಲಿ ಇನ್ ಸ್ಟಾ ಗ್ರಾಂನಲ್ಲಿ ಕಾಣಿಸಿಕೊಳ್ಳುವ ಕುರಿತು ಟೀಕೆಯುತ ಅಭಿಪ್ರಾಯವೂ ಬಂದಿದೆ. ಜತೆಗೆ ಆಕೆಯ ತಾಯಿಯನ್ನು ಅನೇಕರು ಟೀಕಿಸಿದ್ದಾರೆ. ಇನ್ನು ಕೆಲವರು ಕೂದಲಿಗೆ ಬಳಸುವ ಉತ್ಪನ್ನಗಳಿಂದಾಗುವ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

❤️

A post shared by Mia Aflalo Shunem (@miaaflalo) on

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...