alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗಿಸುತ್ತೆ ದುಬೈ ಬಾಲಕನ ಶ್ರೀಮಂತ ಬದುಕು

ರಾಶೆದ್ ಬೆಲ್ಹಾಸಾ ಇನ್ನೂ 15 ವರ್ಷದ ಬಾಲಕ, ಆದ್ರೆ ದುಬೈನ ಶ್ರೀಮಂತ ಪೋರ ಇವನು. ಒಂದು ವಿಮಾನ ಟಿಕೆಟ್ ಗಾಗಿ 19 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಏರ್ ಬಸ್ 380ರಲ್ಲಿ ರಾಜನಂತೆ ಈತ ಪ್ರಯಾಣ ಮಾಡ್ತಿರೋ ವಿಡಿಯೋ ಕೂಡ ವೈರಲ್ ಆಗಿದೆ.

ಕೆಲ ದಿನಗಳ ಹಿಂದಷ್ಟೆ ಇವನ ಫೆರಾರಿ ಕಾರ್ ನೋಡಿ ಸಾಮಾಜಿಕ ತಾಣಗಳಲ್ಲಿ ಎಲ್ರೂ ದಂಗಾಗಿ ಹೋಗಿದ್ರು. ಆ ಕಾರಿಗೆ ರಾಶೆದ್ Louis Vuitton Supreme Print ಹಾಕಿಸಿದ್ದ. ಬಾಲಕನಿಗೆ ಇನ್ನೂ ಡ್ರೈವಿಂಗ್ ಲೈಸನ್ಸ್ ಸಿಕ್ಕಿಲ್ಲ. ಆದ್ರೂ ಅವನ ಬಳಿ ಬೆಂಟ್ಲಿ ಹಾಗು YEEZY ಕಾರುಗಳು ಕೂಡ ಇವೆ.

ಆದ್ರೆ ಇನ್ ಸ್ಟಾಗ್ರಾಮ್ನಲ್ಲಿ ತನ್ನ ಶ್ರೀಮಂತ ಬದುಕನ್ನು ರಾಶೆದ್ ಬಿಚ್ಚಿಡುತ್ತಾನೆ. ಇವನ ಬಳಿ 200,000 ಜೊತೆ ಸ್ನೀಕರ್ಸ್ ಇದೆಯಂತೆ. ಇದರ ಮೌಲ್ಯ 1900 ಡಾಲರ್. ಪ್ರತಿ ತಿಂಗಳು ಬಟ್ಟೆಗಾಗಿಯೇ 5000 ಡಾಲರ್ ಖರ್ಚು ಮಾಡ್ತಾನೆ. ಕ್ರೂರ ಪ್ರಾಣಿಗಳನ್ನೆಲ್ಲ ಮನೆಯಲ್ಲೇ ಸಾಕಿದ್ದಾನೆ.

ಅಷ್ಟಕ್ಕೂ ಈ ಪೋರ ಯಾರು ಗೊತ್ತಾ? ದುಬೈನ ಯಶಸ್ವಿ ಉದ್ಯಮಿ ಸೈಫ್ ಅಹ್ಮದ್ ಬೆಲ್ಹಾಸಾನ ಪುತ್ರ. ಸೈಫ್ ಅಹ್ಮದ್, ಕಿಮ್ ಕರ್ದಾಶಿಯನ್, ಟ್ರಾವಿಸ್ ಸ್ಕಾಟ್, ಮಾರಿಯಾ ಕೇರಿ ಅವರಂತಹ ಸೆಲೆಬ್ರಿಟಿಗಳ ಜೊತೆಗೆ ಸುತ್ತಾಡ್ತಾನೆ. ಕ್ರಿಸ್ಟಿಯಾನೊ ರೊನಾಲ್ಡೋ, ಲಿಯೋನಲ್ ಮೆಸ್ಸಿ, ಪ್ಯಾರಿಸ್ ಹಿಲ್ಟನ್ ಕೂಡ ಇವನಿಗೆ ಆಪ್ತರು.

 

The Real King of the Jungle!! 👑🦁🙏🏽❤️🔑#mydubai #lion #dubai #supreme

A post shared by MoneyKicks-We Living Life (@rsbelhasa) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...