alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲಿ ತಮ್ಮದೇ 13 ಮಕ್ಕಳನ್ನು ಬಂಧಿಸಿಟ್ಟಿದ್ರು ಈ ದಂಪತಿ

ಕ್ಯಾಲಿಫೋರ್ನಿಯಾದ ಮನೆಯಲ್ಲಿ ತನ್ನದೇ 13 ಮಕ್ಕಳನ್ನು ಬಂಧಿಯಾಗಿಟ್ಟುಕೊಂಡಿದ್ದ ಪಾಲಕರನ್ನು ಪೊಲೀಸರು ಬಂಧಿಸಿದ್ದಾರೆ. 57 ವರ್ಷದ ಡೇವಿಡ್ ಎಲೇನ್ ತುರಾಪಿನ್ ಹಾಗೂ 49 ವರ್ಷದ ಲೂಯಿಸ್ ಅನ್ನಾ ಈ ಕೃತ್ಯವೆಸಗಿದ್ದಾರೆ. ಅವರ 13 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವ ಸ್ಥಿತಿಯಲ್ಲಿ ಪೊಲೀಸರಿಗೆ ಸಿಕ್ಕಿದ್ದಾರೆ.

ಮಕ್ಕಳ ವಯಸ್ಸು 2ರಿಂದ 29 ವರ್ಷದೊಳಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೆಲ ಮಕ್ಕಳನ್ನು ಕತ್ತಲ ಕೋಣೆಯಲ್ಲಿ ಮಂಚಕ್ಕೆ ಕಟ್ಟಿ ಹಾಕಲಾಗಿತ್ತು. ವಿಚಾರಣೆ ಮುಂದುವರೆಸಿರುವ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕ್ತಿದ್ದಾರೆ. ಕೋರ್ಟ್ ದಂಪತಿ ಜಾಮೀನಿಗೆ 90 ಲಕ್ಷ ಡಾಲರ್ ನಿಗದಿಪಡಿಸಿದೆ.

17 ವರ್ಷದ ಹುಡುಗಿಯೊಬ್ಬಳು ತಂದೆ-ತಾಯಿ ಕಣ್ಣು ತಪ್ಪಿಸಿ ಮನೆಯಿಂದ ಓಡಿ ಬಂದಿದ್ದಾಳೆ. ನಂತ್ರ 911ಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಮನೆ ಮೇಲೆ ದಾಳಿ ನಡೆಸಿದ ಪೊಲೀಸರಿಗೆ 18-29 ವರ್ಷದ 7 ವಯಸ್ಕರೂ ಈ ಮನೆಯಲ್ಲಿ ಬಂಧನದ ಸ್ಥಿತಿಯಲ್ಲಿರುವುದು ಆಶ್ಚರ್ಯ ಹುಟ್ಟಿಸಿದೆ. ಪಾಲಕರು ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...