alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆಯಿಂದ ಆರಂಭವಾಗುತ್ತಂತೆ 3 ನೇ ಮಹಾಯುದ್ಧ..!

nir-war

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅನೇಕ ದೇಶಗಳು, ಸಮೀಕ್ಷೆಗಳು, ಮಾಧ್ಯಮ ಸಂಸ್ಥೆಗಳು ಡೊನಾಲ್ಡ್ ಟ್ರಂಪ್ ಗೆಲ್ಲೋದಿಲ್ಲ ಎಂದು ಹೇಳಿದ್ದರೂ ಒಬ್ಬರೇ ಒಬ್ಬರು ಮಾತ್ರ ಟ್ರಂಪ್ ಜಯಗಳಿಸುವುದಾಗಿ ಭವಿಷ್ಯ ನುಡಿದಿದ್ದರು. ಅವರೇ ದೇವದೂತ ಕ್ಲೆವೋ ರ್ಯಾಂಟ್ ಹೊರಾಸಿಯೊ ವಿಲ್ಲೆಗಾಸ್.

ಸ್ವಯಂಘೋಷಿತ ದೇವದೂತ ವಿಲ್ಲೆಗಾಸ್, ಡೊನಾಲ್ಡ್ ಟ್ರಂಪ್ ಜಯಗಳಿಸುತ್ತಾರೆ ಎಂದು ಹೇಳಿದ್ದರು. ಅವರು ಹೇಳಿದಂತೆಯೇ ಟ್ರಂಪ್ ಅಧ್ಯಕ್ಷರಾದ ಬಳಿಕ ವಿಲ್ಲೆಗಾಸ್ ಮಾತಿಗೆ, ಭವಿಷ್ಯಕ್ಕೆ ಇನ್ನಿಲ್ಲದ ಮಹತ್ವ ಬಂದಿದೆ.

ವಿಲ್ಲೆಗಾಸ್ ಮತ್ತೊಂದು ಆತಂಕಕಾರಿ ಮಾಹಿತಿಯನ್ನು ಹೇಳಿದ್ದಾರೆ. 3 ನೇ ವಿಶ್ವ ಮಹಾಯುದ್ಧ ಮೇ 13 ರಿಂದಲೇ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ವುನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧೋನ್ಮಾದದಲ್ಲಿದ್ದಾರೆ. ಟ್ರಂಪ್ ಒಂದೇ ಒಂದು ನಿರ್ಧಾರ ಕೈಗೊಂಡು ಕೊರಿಯಾ ಮೇಲೆ ಎಗರಿದಲ್ಲಿ ಯುದ್ಧದ ಕಿಡಿ ಹೊತ್ತಿದಂತೆಯೇ. ಆಗ ಬೇರೆ ದೇಶಗಳು ಕೂಡ ಅನಿವಾರ್ಯ ಕಾರಣಗಳಿಂದ ಯುದ್ಧದಲ್ಲಿ ಪಾಲ್ಗೊಳ್ಳಬೇಕಾಗಬಹುದು ಎನ್ನಲಾಗ್ತಿದೆ.

ವಿಲ್ಲೆಗಾಸ್, ಅಣ್ವಸ್ತ್ರಗಳೊಂದಿಗೆ ಯುದ್ಧ ನಡೆಯಲಿದೆ. ಮೇ 13 ರಿಂದಲೇ ಆರಂಭವಾಗಿ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಹೇಳಿದ್ದು, ಇದು ಸದ್ಯಕ್ಕೆ ಹಾಟ್ ಟಾಪಿಕ್ ಆಗಿದೆ. ಆದರೆ ಅವರು ಹೇಳಿರುವ ಭವಿಷ್ಯ ನಿಜವಾಗುತ್ತಾ ಎಂಬುದು ಮಾತ್ರ ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...