alex Certify
ಕನ್ನಡ ದುನಿಯಾ       Mobile App
       

Kannada Duniya

ಅದೃಷ್ಟ ಅಂದ್ರೆ ಈಕೆಯದ್ದೇ ನೋಡಿ….

julia

ಆಸ್ಟ್ರೇಲಿಯಾದ ಮಹಿಳೆ ಜೂಲಿಯಾ ಮೊನಾಕೋ ನಿಜಕ್ಕೂ ಅದೃಷ್ಟವಂತೆ. ಯಾಕಂದ್ರೆ ಆಕೆ ಸತತ ಮೂರನೇ ಬಾರಿ ಭಯೋತ್ಪಾದಕರ ದಾಳಿಯಲ್ಲಿ ಬಚಾವ್ ಆಗಿದ್ದಾಳೆ. ಬಾರ್ಸಿಲೋನಾ, ಪ್ಯಾರಿಸ್ ಹಾಗೂ ಲಂಡನ್ ಮೂರು ಕಡೆಗಳಲ್ಲೂ ಭಯೋತ್ಪಾದಕ ದಾಳಿ ನಡೆದಾಗ ಜೂಲಿಯಾ ಕೂಡ ಅಲ್ಲೇ ಇದ್ಲು.

spain-barcelona_392c8d74-840d-11e7-929c-3545fa1ac73c

ಮೆಲ್ಬರ್ನ್ ನಿವಾಸಿಯಾಗಿರೋ ಜೂಲಿಯಾ ಬಾರ್ಸಿಲೋನಾಗೆ ಬಂದಿದ್ಲು. ನಿನ್ನೆ ಶಾಪಿಂಗ್ ಮಾಡ್ತಾ ಇದ್ಲು . ಇದ್ದಕ್ಕಿದ್ದಂತೆ ಬಿಳಿ ಬಣ್ಣದ ವಾಹನವೊಂದು ಪ್ರವಾಸಿಗರ ಮಧ್ಯೆಯೇ ತೂರಿ ಬಂದಿತ್ತು. ಆ ರಭಸಕ್ಕೆ 13 ಮಂದಿ ಪ್ರಾಣ ಕಳೆದುಕೊಂಡ್ರು. ಜೂಲಿಯಾ ಕಣ್ಣೆದುರಲ್ಲೇ ಈ ಭಯಾನಕ ಘಟನೆ ನಡೆದಿದೆ.

ಟಿ-ಶರ್ಟ್ ಖರೀದಿ ಮಾಡ್ತಿದ್ದ ಜೂಲಿಯಾ ಅದನ್ನು ಅಲ್ಲೇ ಬಿಟ್ಟು ತಪ್ಪಿಸಿಕೊಳ್ಳಲು ಕಿಟಕಿ ಕಡೆಗೆ ಓಡಿದ್ದಾಳೆ. ಜೂನ್ 3ರಂದು ಲಂಡನ್ ನಲ್ಲಿ ಉಗ್ರನೊಬ್ಬ ಚಾಕುವಿನಿಂದ ಇರಿದು 8 ಜನರನ್ನು ಕೊಂದಿದ್ದ. ಆಗ ಜೂಲಿಯಾ ಲಂಡನ್ ನಲ್ಲಿದ್ಲು. ಅದೃಷ್ಟ ಜೊತೆಗಿದ್ದಿದ್ರಿಂದ ಪಾರಾಗಿ ಬಂದಿದ್ಲು.

ಅದಾಗಿ ಕೆಲವೇ ದಿನಗಳ ನಂತರ ಪ್ಯಾರಿಸ್ ನಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿ ಮೇಲೆ ಹ್ಯಾಮರ್ ನಿಂದ ಹಲ್ಲೆ ಮಾಡಿದ್ದ. ಈ ದಾಳಿ ನಡೆದಾಗ ಜೂಲಿಯಾ ಪ್ಯಾರಿಸ್ ನಲ್ಲಿದ್ಲು. ಮೂರು ಬಾರಿ ಆಕೆ ಉಗ್ರರ ದಾಳಿಯಲ್ಲಿ ಬಚಾವ್ ಆಗಿ ಬಂದಿದ್ದಾಳೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...