alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳನಿಗೆ ತಕ್ಕ ಶಾಸ್ತಿ ಮಾಡಿವೆ ಈ ಮಂಗಗಳು…!

ದಕ್ಷಿಣ ಅಮೆರಿಕದಲ್ಲಿ ಹೆಚ್ಚಾಗಿ ಕಾಣಸಿಗುವ ಅಳಿಲಿನ ಜಾತಿಯ ಮಂಗಗಳು ಮನುಷ್ಯರಿಗಿಂತ ತೀರಾ ವಿಭಿನ್ನ. ಮನುಷ್ಯರೊಂದಿಗೆ ಬದುಕುವುದು ಕೂಡ ಅವುಗಳಿಗೆ ಇಷ್ಟವಿಲ್ಲ. ನ್ಯೂಜಿಲೆಂಡ್ ನ ವೆಲ್ಲಿಂಗ್ಟನ್ ಮೃಗಾಲಯದಲ್ಲಿದ್ದ ಈ ಅಳಿಲು ಮಂಗಗಳನ್ನು ಕದಿಯುವ ಯತ್ನ ನಡೆದಿತ್ತು.

ವಿಶೇಷ ಅಂದ್ರೆ ಈ ಕೋತಿಗಳೇ ಆ ಕಳ್ಳನನ್ನು ಸದೆಬಡಿದಿವೆ. ಮಂಗವನ್ನು ಕದಿಯಲು ಬಂದಿದ್ದ ಅವನನ್ನು ಓಡಿಸಿಬಿಟ್ಟಿವೆ. ತಮ್ಮನ್ನು ತಾವೇ ರಕ್ಷಿಸಿಕೊಂಡಿವೆ. ಈ ಹೋರಾಟದಲ್ಲಿ ಕೆಲವು ಮಂಗಗಳು ಗಾಯಗೊಂಡಿವೆ. ಒಂದು ಕೋತಿ ಕಾಣೆಯಾಗಿದೆ ಅಂತಾನೇ ಮೃಗಾಲಯದ ಸಿಬ್ಬಂದಿ ಭಾವಿಸಿದ್ರು.

ಅದನ್ನು ಕಳ್ಳ ಹೊತ್ತೊಯ್ದಿದ್ದಾನೆ ಎಂದುಕೊಂಡಿದ್ರು. ಆದ್ರೆ ಮಂಗ ಕಳ್ಳನ ಪಾಲಾಗಿಲ್ಲ, ಉಳಿದ ಮಂಗಗಳೆಲ್ಲ ಜೊತೆಯಾಗಿ ಕಳ್ಳನ ವಿರುದ್ಧ ಹೋರಾಡಿ ಅದನ್ನು ಬಚಾವ್ ಮಾಡಿವೆ. ಗಾಯಗೊಂಡಿರುವ ಮಂಗಗಳ ಆರೋಗ್ಯ ಕೂಡ ಸುಧಾರಿಸಿದೆ ಅಂತಾ ಝೂ ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...