alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳರು ಕದ್ದ ಡ್ರಿಂಕ್ಸ್ ಮೌಲ್ಯ ಕೇಳಿದ್ರೆ ನೀವು ದಂಗಾಗ್ತೀರಿ…!

ಬೆಲ್ಜಿಯಂನ ಕಳ್ಳರ ಗುಂಪೊಂದು ಒಂದು ಮಿಲಿಯನ್ ಯುರೋ ಮೌಲ್ಯದ ಎನರ್ಜಿ ಡ್ರಿಂಕ್ ಕದ್ದು ಪೊಲೀಸರಿಗೆ ಅಚ್ಚರಿ ಹುಟ್ಟಿಸಿದೆ. ರೆಡ್ಬುಲ್ ಕಂಪನಿಯ 300ಕ್ಕೂ ಹೆಚ್ಚು ಕೇಸ್ ಎನರ್ಜಿ ಡ್ರಿಂಕ್ ಗಳನ್ನ ಕಳ್ಳರ ಗುಂಪು ಬೆಲ್ಜಿಯಂ ಫ್ರಾನ್ಸ್ ಗಡಿಯಲ್ಲಿರುವ ಮೆನಿನ್ ನ ಮಳಿಗೆಯೊಂದರಿಂದ ಕದ್ದಿದೆ. ವೃತ್ತಿಪರ ಕಳ್ಳರ ತಂಡದಿಂದ ಈ ಕೃತ್ಯ ನಡೆದಿದೆ ಅಂತ ಪೊಲೀಸರು ತಿಳಿಸಿದ್ದಾರೆ.

ಮಳಿಗೆಯೊಂದಕ್ಕೆ 11 ಟ್ರಕ್ ಗಳಲ್ಲಿ ಬಂದಂತಾ ಎನರ್ಜಿ ಡ್ರಿಂಕ್ ಗಳನ್ನ ಕದಿಯೋಕೆ ಕಳ್ಳರ ತಂಡ ಪದೇ ಪದೇ ಮಳಿಗೆಗೆ ಬಂದು ಸಂಚು ಹೂಡುತ್ತಿತ್ತು. ಆನಂತರದಲ್ಲಿ ಮೋಟಾರ್ ಸೈಕಲ್ ಗಳ ಮೇಲೆ ಬಂದ ಕಳ್ಳರು 300 ಕ್ಕೂ ಹೆಚ್ಚು ಕೇಸ್ ಗಳಷ್ಟು ಎನರ್ಜಿ ಡ್ರಿಂಕ್ ಹೊತ್ತೊಯ್ದಿದ್ದಾರೆ.

ಸಿಸಿ ಟಿವಿಯಲ್ಲಿ ಇಡೀ ದೃಶ್ಯ ದಾಖಲಾಗಿದೆ. ಸಿಸಿಟಿವಿ ದೃಶ್ಯಗಳ ಅಧಾರದ ಮೇಲೆಯೇ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ರೆಡ್ ಬುಲ್ ಗಿವ್ಸ್ ಯು ವಿಂಗ್ ಅನ್ನೋ ಟ್ಯಾಗ್ ಲೈನ್ ನ ಹಾಗೆ ಕಳ್ಳರ ಕೈ ಚಳಕ ಕೂಡ ನಡೆದಿರೋದು ವಿಚಿತ್ರ ಎನಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...