alex Certify
ಕನ್ನಡ ದುನಿಯಾ       Mobile App
       

Kannada Duniya

ಶೌಚಕ್ಕೆ ಹೋದ ಕಳ್ಳ ಮಾಡಿದ್ದೇನು ಗೊತ್ತಾ..?

burglar-leaves-dna-in-toilet-650_650x400_41502283626

ಅಮೆರಿಕದಲ್ಲಿ ಶೌಚಕ್ಕೆ ಹೋಗಿ ನೀರು ಹಾಕದೇ ಬಂದಿದ್ದ ಕಳ್ಳನಿಗೆ ಅದೇ ಮುಳುವಾಗಿದೆ. ಇದೇ ಕಾರಣಕ್ಕೆ ಆತ ಪೊಲೀಸರ ಬಲೆಗೆ ಬಿದ್ದಿದ್ದಾನೆ. 2016ರ ಅಕ್ಟೋಬರ್ ನಲ್ಲಿ ಆಂಡ್ರೂ ಡೇವಿಡ್ ಎಂಬಾತ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ. ಕಳೆದ ತಿಂಗಳು 28ರಂದು ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಕಳ್ಳತನ ಮಾಡಿದ ಮನೆಯಲ್ಲೇ ಆ್ಯಂಡ್ರೂ ಶೌಚಕ್ಕೆ ಹೋಗಿದ್ದ. ಅಲ್ಲಿಂದ ಬೇಗ ಪರಾರಿಯಾಗುವ ಗಾಬರಿಯಲ್ಲಿ ಫ್ಲಶ್ ಮಾಡಿರಲಿಲ್ಲ. ಪ್ರಕರಣದ ತನಿಖೆಗೆ ಬಂದಿದ್ದ ಪೊಲೀಸರು ಶೌಚದ ಸ್ಯಾಂಪಲ್ ತೆಗೆದುಕೊಂಡು ಹೋಗಿದ್ರು. ಅದರ ಜೊತೆಗೆ ಬಂಧಿತ ಆ್ಯಂಡ್ರೂನ DNA ಮ್ಯಾಚ್ ಆಗಿದೆ.

ಡಿಎನ್ಎ ಮೂಲಕ ಕಳ್ಳನನ್ನು ಪತ್ತೆ ಮಾಡಿರೋದು ವಿಶೇಷ. ಇದೊಂದು ಅಪರೂಪದ ಪ್ರಕರಣವೂ ಹೌದು. ಆ್ಯಂಡ್ರೂ ಬಿಡುಗಡೆ ಹೊಂದಲು ಬಯಸಿದಲ್ಲಿ 70,000 ಡಾಲರ್ ಹಣವನ್ನು ಜಾಮೀನಿಗಾಗಿ ಪಾವತಿಸಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...