alex Certify
ಕನ್ನಡ ದುನಿಯಾ       Mobile App
       

Kannada Duniya

ಜೆಸಿಬಿ ತಂದು ATM ಒಡೆದ್ರೂ ಕಳ್ಳನಿಗೆ ಸಿಗಲಿಲ್ಲ ಬಿಡಿಗಾಸು

thief-atm-excavator_650x400_61497079480

ಅಮೆರಿಕದಲ್ಲಿ ಖತರ್ನಾಕ್ ಕಳ್ಳನಿಗೆ ತಕ್ಕ ಶಾಸ್ತಿಯಾಗಿದೆ. ಅತಿ ಆಸೆ ಗತಿಗೇಡು ಎಂಬಂತೆ ಕಷ್ಟಪಟ್ಟು ಎಟಿಎಂ ಒಡೆದರೂ ನಯಾಪೈಸೆ ಸಿಕ್ಕಿಲ್ಲ. ಸರಿರಾತ್ರಿಯಲ್ಲಿ ಈ ಖದೀಮ ಕನ್ ಸ್ಟ್ರಕ್ಷನ್ ಸೈಟ್ ಒಂದರ ಬಳಿ ನಿಲ್ಲಿಸಿದ್ದ ಜೆಸಿಬಿಯನ್ನೇ ಕದ್ದುಕೊಂಡು ಬಂದಿದ್ದ.

ಜೆಸಿಬಿಯಿಂದ ಎಟಿಎಂ ಯಂತ್ರವನ್ನು ಒಡೆದು ಹಾಕಿದ್ದಾನೆ. ಆದ್ರೆ ಎಟಿಎಂನಲ್ಲಿ ಒಂದೇ ಒಂದು ಪೈಸೆಯೂ ಇರಲಿಲ್ಲ. ಕಳ್ಳತನಕ್ಕೆ ಮಾಡಿದ ಶ್ರಮವೆಲ್ಲಾ ವ್ಯರ್ಥವಾಗಿ ಬಂದ ದಾರಿಗೆ ಸುಂಕವಿಲ್ಲ ಅಂತಾ ಬರಿಗೈನಲ್ಲಿ ವಾಪಸ್ಸಾಗಿದ್ದಾನೆ. ಕಳ್ಳ ಜೆಸಿಬಿ ಬಳಸಿ ಎಟಿಎಂ ಒಡೆದ ದೃಶ್ಯವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಕಳ್ಳನಿಗೆ ಬಿಡಿಗಾಸೂ ಸಿಕ್ಕಿಲ್ಲ. ಆದ್ರೆ ಎಟಿಎಂ ದುರಸ್ಥಿಗಾಗಿ 10,000 ಡಾಲರ್ ಖರ್ಚಾಗಿದೆ. ಜೂನ್ 1ರಂದು ಅಮೆರಿಕದ ಮೇರಿ ಲ್ಯಾಂಡ್ ನಲ್ಲಿ ನಡೆದ ವಿಚಿತ್ರ ಕಳ್ಳತನ ಪ್ರಕರಣ ಇದು. ಈವರೆಗೂ ಇಂತಹ ಕ್ರೇಝಿ ಕಳ್ಳರನ್ನು ನೋಡಿರಲಿಲ್ಲ ಅಂತಾ ಪೊಲೀಸರೇ ಹೇಳ್ತಿದ್ದಾರೆ. ಈ ಖದೀಮ 2016ರಲ್ಲೂ ಹಲವು ಎಟಿಎಂ ಕಳ್ಳತನಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...