alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳತನಕ್ಕೆ ಹೋಗಿದ್ದವನು ಸುಲಭವಾಗಿ ಸಿಕ್ಕಿಬಿದ್ದ…!

ಪಾರದರ್ಶಕ ಪ್ಲಾಸ್ಟಿಕ್ ನಿಂದ ಮುಖ ಮುಚ್ಚಿಕೊಂಡು ಕಳ್ಳತನ ಮಾಡಲು ಹೋಗಿ ಕಳ್ಳನೊಬ್ಬ ಸಿಕ್ಕಿಬಿದ್ದ ಘಟನೆ ಅಮೆರಿಕದ ಜೋರ್ಜಿಯಾ ಎಂಬಲ್ಲಿ ನಡೆದಿದೆ.

ಇಲ್ಲಿನ ಗೇಮಿಂಗ್ ಪಾರ್ಲರ್ ನಲ್ಲಿ ಕಳ್ಳತನ ಮಾಡಿದ್ದ ಕಳ್ಳ ತನ್ನ ಮುಖ ಗುರುತು ಸಿಗಬಾರದೆಂದು ಪ್ಲಾಸ್ಟಿಕ್ ಬಾಟಲ್ ಗಳಿಂದ ಮುಖ ಮುಚ್ಚಿಕೊಂಡಿದ್ದ. ಆದರೆ ಆ ಕಳ್ಳನ ದುರಾದೃಷ್ಟವೋ ಏನೋ….ಸಿಸಿ ಟಿವಿಯಲ್ಲಿ ಆತನ ಮುಖ ಸ್ಪಷ್ಟವಾಗಿ ಕಾಣುವಂತಿತ್ತು. ಇದರಿಂದ ಇಲ್ಲಿನ ಸೇಂಟ್ ಮೇರಿಸ್ ಪೊಲೀಸರಿಗೆ ಈ ಕಳ್ಳ ಸುಲಭವಾಗಿ ಸಿಕ್ಕಿಬಿದ್ದಿದ್ದಾನೆ.

ಇನ್ನು ಭಾರತದ ಕನ್ಯಾಕುಮಾರಿಯಲ್ಲೂ ಇಂಥದ್ದೇ ಘಟನೆ ನಡೆದಿದೆ. ಕಳ್ಳನೊಬ್ಬ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳಿಂದ ಮುಖ ಮುಚ್ಚಿಕೊಂಡು ಮೊಬೈಲ್ ಶಾಪ್ ಒಂದರಲ್ಲಿ 1 ಲಕ್ಷ ಹಣವನ್ನು ಕದ್ದು ಪರಾರಿಯಾಗಿದ್ದ. ಆದರೆ ಇಲ್ಲಿಯೂ ಕಳ್ಳನ ಮುಖ ಸಿಸಿ ಟಿವಿಯಲ್ಲಿ ಕಾಣಿಸಿದ್ದರಿಂದ ಪೊಲೀಸರು ಕೆಲವೇ ಗಂಟೆಗಳಲ್ಲಿ ಕಳ್ಳನನ್ನು ಹಿಡಿದು ಬಂಧಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...