alex Certify
ಕನ್ನಡ ದುನಿಯಾ       Mobile App
       

Kannada Duniya

ಚಾ ಕುಡಿಯೋ ತನ್ಕ ಸುಮ್ನಿರಪ್ಪ ಅಂದಿದ್ರು ಆಂಟಿ..!

Thief Threatens To Stab Punjabi Lady In UK, She Tells Him To Wait Until She Finishes Her Chai!ಅಂದು ಆ ಕಳ್ಳನ ಗ್ರಹಚಾರ ಸರಿಯಿದ್ದಂತಿರಲಿಲ್ಲ. ಹೀಗಾಗಿ ಆಂಟಿ ಆರಾಮಾಗಿ ಕುಳಿತು ಚಾ ಕುಡಿಯುತ್ತಿದ್ದ ವೇಳೆಯೇ ನುಗ್ಗಿ ಬೆದರಿಸಿ ಹಣ ದೋಚಲು ಮುಂದಾಗಿದ್ದಾನೆ. ಆಂಟಿ ಸ್ವಲ್ಪ ತಡೆಯಪ್ಪ ಅಂದರೂ ಕೇಳದ ಪರಿಣಾಮ ಅದಕ್ಕೆ ತಕ್ಕ ಪ್ರತಿಫಲ ಅನುಭವಿಸಿದ್ದಾನೆ.

ಹೌದು. ಇಂತದೊಂದು ಘಟನೆ ನಡೆದಿರುವುದು ಯುನೈಟೆಡ್ ಕಿಂಗ್ಡಂ ನಲ್ಲಿ. ಪಂಜಾಬ್ ಮೂಲದ 49 ವರ್ಷದ ಕರಂಜಿತ್ ಸಂಗಾ ಅಲ್ಲೊಂದು ಸ್ಟೋರ್ ನಡೆಸುತ್ತಿದ್ದು, ಅವರು ಚಾ ಕುಡಿಯುತ್ತಾ ಕುಳಿತಿದ್ದ ವೇಳೆ ಕೈಯ್ಯಲ್ಲಿ ಚಾಕು ಹಿಡಿದ 35 ವರ್ಷದ ಸ್ಟುವರ್ಟ್ ಗ್ಲಿಸನ್ ಒಳ ನುಗ್ಗಿದ್ದಾನೆ.

ಕರಂಜಿತ್ ಸಂಗಾರಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ ಆತ, ಹಣ ನೀಡುವಂತೆ ಹೇಳಿದ್ದಾನೆ. ಆದರೆ ಚಾ ಕುಡಿಯುತ್ತಾ ಕುಳಿತಿದ್ದ ಕರಂಜಿತ್ ಸ್ವಲ್ಪ ತಡೆಯುವಂತೆ ಹೇಳಿದ್ದಾರೆ. ಆದರೆ ಅದನ್ನು ಲೆಕ್ಕಿಸದ ಸ್ಟುವರ್ಟ್ ಹಣ ನೀಡುವಂತೆ ಹೂಂಕರಿಸಿದ್ದಾನೆ. ನೆಮ್ಮದಿಯಿಂದ ಚಾ ಕುಡಿಯುವುದಕ್ಕೆ ಭಂಗ ತಂದ ಕಳ್ಳನ ಮೇಲೆ ವಿಪರೀತ ಕೋಪಗೊಂಡ ಕರಂಜಿತ್ ತಿರುಗೇಟು ನೀಡಿದಾಗ ಕಕ್ಕಾಬಿಕ್ಕಿಯಾದ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಸ್ಟೋರ್ ನಲ್ಲಿದ್ದ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆತನನ್ನು ಬಂಧಿಸಿದ್ದು, ಇದೀಗ 5 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...