alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಳ್ಳನ ದಡ್ಡತನಕ್ಕೆ ಬಿದ್ದು ಬಿದ್ದು ನಗ್ತಿದ್ದಾರೆ ಜನ…!

ಶಾಂಘೈನಲ್ಲಿ ಒಬ್ಬ ವಿಚಿತ್ರವಾದ ಕಳ್ಳ ಪೊಲೀಸರ ಅತಿಥಿಯಾಗಿದ್ದಾನೆ. ಅವನು ಸಿಸಿ ಟಿವಿ ಕ್ಯಾಮರಾ ಮಾತ್ರ ಕದ್ದಿದ್ದ. ಕದ್ದಂತಾ ಸಿಸಿ ಟಿವಿ ಕ್ಯಾಮರಾವನ್ನ ಅವನು ಮಾರಾಟ ಮಾಡದೆ ಅದೇ ಕ್ಯಾಮರಾವನ್ನ ತನಗೆ ಬೇಕಾದ ಹಾಗೆ ಬಳಸಿಕೊಳ್ತಿದ್ದ.

ಆದರೆ ಇದೇ ತಂತ್ರ ಈಗ ಆತನಿಗೆ ಮುಳುವಾಗಿದೆ. ತಾನು ಕದ್ದ ಸಿಸಿ ಟಿವಿ ಕ್ಯಾಮರಾವನ್ನು ಐಪಿ ಅಡ್ರೆಸ್ ಸಹ ಬದಲಿಸದೆ ತನ್ನ ಮನೆಯಲ್ಲಿ ಅಳವಡಿಸಿಕೊಂಡಿದ್ದಾನೆ ಈ ಕಳ್ಳ. ಆದರೆ ಆತನ ದುರಾದೃಷ್ಟ ಈತನ ಮನೆಯ ಲೈವ್ ದೃಶ್ಯಗಳು ಸಿಸಿ ಟಿವಿ ಕ್ಯಾಮರಾ ಮಾಲೀಕನಿಗೆ ರವಾನೆಯಾಗಿವೆ.

ತನ್ನ ಮಕ್ಕಳ ಮೇಲೆ ನಿಗಾ ಇರಿಸಲು ಸಿಸಿ ಟಿವಿ ಕ್ಯಾಮರಾವನ್ನು ಮನೆಯಲ್ಲಿ ಫಿಕ್ಸ್ ಮಾಡಿಕೊಂಡಿದ್ದನಂತೆ ಈ ಕಳ್ಳ. ತನ್ನ ಮನೆಯ ಕೆಲ ಖಾಸಗಿ ದೃಶ್ಯಗಳೂ ಸಿಸಿ ಟಿವಿ ಕ್ಯಾಮರಾ ಮಾಲೀಕನಿಗೆ ರವಾನೆಯಾಗಿರುವುದರಿಂದ ಈಗ ಪೇಚಾಡಿಕೊಳ್ಳುತ್ತಿದ್ದಾನೆ. ಈ ಕಳ್ಳನ ಚಾಲಾಕಿತನದ ಸುದ್ದಿ ಈಗ ಚೀನಾದ ಆನ್ಲೈನ್ ಪ್ರಪಂಚದಲ್ಲಿ ಸಖತ್ ವೈರಲ್ ಆಗಿಬಿಟ್ಟಿದೆ. ಕೆಲವರು ಕಳ್ಳನನ್ನ ಟ್ರೋಲ್ ಮಾಡುತ್ತಿದ್ದರೆ ಮತ್ತೆ ಕೆಲವರು ಅವನ ದಡ್ಡತನವನ್ನ ಆಡಿಕೊಂಡ ನಗ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...