alex Certify
ಕನ್ನಡ ದುನಿಯಾ       Mobile App
       

Kannada Duniya

ಸೂಟ್ ಕೇಸ್ ನಲ್ಲಿ ಅಡಗಿ ಕುಳಿತು ಇಂಥಾ ಕೆಲಸ ಮಾಡ್ತಿದ್ದ ಕಳ್ಳ

ಪ್ಯಾರಿಸ್ ನಲ್ಲಿ ನಿಗೂಢವಾಗಿದ್ದ ಕಳವು ಪ್ರಕರಣವೊಂದನ್ನು ಪೊಲಿಸರು ಬೇಧಿಸಿದ್ದಾರೆ. ಪ್ಯಾರಿಸ್ ನಿಂದ ಬ್ಯೂವಾಯಿಸ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಹಲವು ಪ್ರಯಾಣಿಕರ ಲಗೇಜ್ ನಲ್ಲಿದ್ದ ವಸ್ತುಗಳು ಕಾಣೆಯಾಗಿತ್ತು. ಈ ಪ್ರಕರಣವನ್ನು ಬಯಲಿಗೆಳೆಯಲು ಬಸ್ ಚಾಲಕ ಪೊಲೀಸರಿಗೆ ಸಹಾಯ ಮಾಡಿದ್ದಾನೆ.

ಬಸ್ ನಲ್ಲಿ ಕಂದು ಬಣ್ಣದ ದೊಡ್ಡ ಸೂಟ್ ಕೇಸ್ ಒಂದು ಚಾಲಕನ ಕಣ್ಣಿಗೆ ಬಿದ್ದಿತ್ತು. ಆ ಬ್ಯಾಗ್ ತನ್ನಿಂತಾನೇ ಮುಂದಕ್ಕೆ ಚಲಿಸುತ್ತಿತ್ತು. ಯಾಕಂದ್ರೆ ಕಳ್ಳ ಅದೇ ಸೂಟ್ ಕೇಸ್ ನಲ್ಲಿ ಅಡಗಿ ಕುಳಿತಿದ್ದ. ಲಗೇಜ್ ಹಾಕಿದ್ದ ಡಿಕ್ಕಿಯಲ್ಲಿ ಆತನ ಬ್ಯಾಗ್ ನೊಳಕ್ಕೆ ಅಡಗಿ ಕುಳಿತಿರುತ್ತಿದ್ದ.

ಬಸ್ ಹೊರಟ ತಕ್ಷಣ ಬ್ಯಾಗ್ ನ ಜಿಪ್ ತೆರೆದು ಹೊರಬಂದು ಉಳಿದ ಪ್ರಯಾಣಿಕರ ಲಗೇಜ್ ನಲ್ಲಿದ್ದ ವಸ್ತುಗಳನ್ನು ಕದಿಯುತ್ತಿದ್ದ. ಈ ಚಾಲಾಕಿ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಅಡಗಿ ಕುಳಿತಿದ್ದ ಬ್ಯಾಗ್ ನಲ್ಲಿ ಕದ್ದಿದ್ದ ಎರಡು ಲ್ಯಾಪ್ಟಾಪ್ ಹಾಗೂ ಹಣ ಕೂಡ ಪತ್ತೆಯಾಗಿದೆ.

ರೊಮೇನಿಯಾ ಮೂಲದ ಈ ಕಳ್ಳನಿಗೆ ಸುಮಾರು 40 ವರ್ಷ ವಯಸ್ಸು. ಈ ಹಿಂದೆ ಕೂಡ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಸದ್ಯ ಅವನಿಗೆ ಪ್ಯಾರಿಸ್ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...