alex Certify
ಕನ್ನಡ ದುನಿಯಾ       Mobile App
       

Kannada Duniya

ಅದೃಷ್ಟ ಕೈಕೊಟ್ಟಿದ್ದಕ್ಕೆ ಸಿಕ್ಕಿಬಿದ್ದ ಕಳ್ಳ…!

ಅದೃಷ್ಟ ಕೈಕೊಟ್ಟರೆ ಏನು ಬೇಕಾದರೂ ಆಗಬಹುದು ಅನ್ನೋದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.

ಅಮೆರಿಕದ ಮೆಸಾಚುಸೆಟ್ಸ್ ನಗರದಲ್ಲಿ ಕಳ್ಳನೊಬ್ಬ ಸೂಪರ್ ಮಾರ್ಕೆಟ್ ನಲ್ಲಿ ಕಳ್ಳತನ ಮಾಡೋಕೆ ಬಂದಿದ್ದ. ಕಳ್ಳತನ ತಡೆಯೋಕೆ ಅಂತ ಮಾರ್ಕೆಟ್ ನಲ್ಲಿ ಇರಿಸಲಾಗಿದ್ದ ಅಲಾರಾಂ ಸೈರನ್ ಹೊಡೆಯಬಾರದು ಎಂದು ಅದನ್ನು ಮಣ್ಣಿನಿಂದ ಮುಚ್ಚಿದ್ದ.

ಆದರೆ ಅದೃಷ್ಟ ಕೈಕೊಟ್ಟರೆ ಯಾರು ತಾನೆ ಏನು ಮಾಡೋಕಾಗುತ್ತೆ ಹೇಳಿ….ಕಳ್ಳನ ದುರಾದೃಷ್ಟಕ್ಕೆ ಅಲಾರಾಂ ಸೈರನ್ ಹೊಡೆದು ಬಿಟ್ಟಿದೆ. ಸೈರನ್ ಹೊಡೆಯುತ್ತಲೇ ಕಳ್ಳ ಓಡಿಹೋಗಿದ್ದಾನೆ. ಅಲ್ಲದೇ ಮಣ್ಣಿನ ಮೇಲೆ ತನ್ನ ಬೆರಳಚ್ಚನ್ನೂ ಬಿಟ್ಟಿದ್ದಾನೆ.

ಕಳೆದ ವರ್ಷದ ಡಿಸೆಂಬರ್ ನಲ್ಲಿ ನಡೆದ ಈ ಕಳ್ಳತನ ಯತ್ನವನ್ನು ಪೊಲೀಸರು ಬೇಧಿಸಿದ್ದು, ಬೆರಳಚ್ಚಿನ ಸಹಾಯದಿಂದ ಕಳ್ಳನನ್ನು ಹಿಡಿದಿದ್ದಾರೆ. ಇದಕ್ಕೇ ಹೇಳೋದು ಅದೃಷ್ಟ ಕೈಕೊಟ್ಟರೆ ಏನು ಬೇಕಾದರೂ ಆಗಬಹುದು ಎಂದು…!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...