alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಗಿದೆ ಕಳ್ಳನ ಮೂರ್ಖತನ

thief-breaks-doorless-garage_650x400_61498471299

ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತಾಗಿದೆ ಕಳ್ಳನೊಬ್ಬನ ಪರಿಸ್ಥಿತಿ. ಇವನನ್ನು ಜಗತ್ತಿನ ಅತ್ಯಂತ ದಡ್ಡ ಕಳ್ಳ ಅಂತಾನೂ ನೀವು ಕರೆಯಬಹುದು. ಗ್ಯಾರೇಜ್ ಬಾಗಿಲು ತೆರೆದೇ ಇದ್ರೂ ಈ ಭೂಪ ಕಿಟಕಿ ಒಡೆದುಕೊಂಡು ಒಳಕ್ಕೆ ನುಗ್ಗಿದ್ದಾನೆ. ಕಳ್ಳನ ಈ ದಡ್ಡತನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಪ್ಪು ಬಟ್ಟೆ ಧರಿಸಿ, ಮುಖಕ್ಕೂ ಮಾಸ್ಕ್ ಹಾಕಿಕೊಂಡಿದ್ದ ಕಳ್ಳ ಗ್ಯಾರೇಜ್ ಗೆ ಎಂಟ್ರಿ ಕೊಟ್ಟಿದ್ದಾನೆ. ಒಂದು ಬದಿಯಲ್ಲಿದ್ದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾನೆ. ಆಗದೇ ಇದ್ದಾಗ ಕಿಟಕಿ ಮೇಲೆ ಕಳ್ಳನ ಕಣ್ಣು ಬಿದ್ದಿತ್ತು. ಕಷ್ಟಪಟ್ಟು ಕಿಟಕಿಯನ್ನು ಮುರಿದು ಒಳಕ್ಕೆ ಹೋಗಿದ್ದಾನೆ.

ಆದ್ರೆ ಗ್ಯಾರೇಜ್ ನ ಮುಖ್ಯದ್ವಾರ ತೆರೆದೇ ಇತ್ತು. ಒಳಕ್ಕೆ ಹೋದಮೇಲೆ ಕಳ್ಳನಿಗೆ ತನ್ನ ಮೂರ್ಖತನದ ಅರಿವಾಗಿದೆ. ಕಿಟಕಿಯಿಂದ ಹೋದವನು ತೆರದೇ ಇದ್ದ ಬಾಗಿಲಿನ ಮೂಲಕ ಹೊರಬಿದ್ದಿದ್ದಾನೆ. ಬಂದ ದಾರಿಗೆ ಸುಂಕವಿಲ್ಲ ಅಂತಾ ಬರಿಗೈನಲ್ಲೇ ಹೊರಟು ಹೋಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...