alex Certify
ಕನ್ನಡ ದುನಿಯಾ       Mobile App
       

Kannada Duniya

ದರೋಡೆಕೋರರ ಬೆವರಿಳಿಸಿದ್ದಾನೆ ಮನೆ ಮಾಲೀಕ

homeowner-fights-robbers-with-machete_650x400_51497942515

ಫ್ಲೋರಿಡಾದಲ್ಲಿ ನಡೆದ ದರೋಡೆ ಪ್ರಕರಣವೊಂದರ ವಿಡಿಯೋ ವೈರಲ್ ಆಗಿದೆ. ಬೆಳಗ್ಗೆ 4.45ರ ವೇಳೆಗೆ ಮನೆಯ ಮಾಲೀಕ ಹೊರಭಾಗದಲ್ಲಿ ಕುಳಿತು ಮಾತನಾಡ್ತಾ ಇದ್ದ. ಈ ವೇಳೆ ಇದ್ದಕ್ಕಿದ್ದಂತೆ ಗನ್ ಹಿಡಿದು ಮೂವರು ದರೋಡೆಕೋರರು ಎಂಟ್ರಿ ಕೊಟ್ಟಿದ್ದಾರೆ.

ಕೂಡಲೇ ಕುರ್ಚಿ ಹಿಡಿದು ಅವರತ್ತ ಬೀಸಿದ ಮನೆ ಮಾಲೀಕ ಕೊನೆಗೆ ಅಲ್ಲೇ ಇದ್ದ ಮರದ ತುಂಡೊಂದನ್ನು ಕೈಯ್ಯಲ್ಲಿ ತೆಗೆದುಕೊಂಡು ಪ್ರತಿರೋಧ ತೋರಿದ್ದಾನೆ. ನಂತರ ಅದನ್ನು ಅಲ್ಲೇ ಬಿಸಾಡಿ ಮನೆಯೊಳಕ್ಕೆ ತೆರಳಿದ್ದಾನೆ. ಅವನ ಹಿಂದೆಯೇ ಇಬ್ಬರು ದರೋಡೆಕೋರರು ಕೂಡ ಮನೆಯೊಳಗ್ಗೆ ನುಗ್ಗಿದ್ರು.

ಮನೆ ಮಾಲೀಕ ಒಳಗಡೆ ಇದ್ದ ಖಡ್ಗದಂತಹ ಕತ್ತಿಯನ್ನು ತೆಗೆದುಕೊಂಡು ಖದೀಮರ ಬೆವರಿಳಿಸಿದ್ದ. ಕೈಯಲ್ಲಿ ಗನ್ ಇದ್ರೂ ದುಷ್ಕರ್ಮಿಗಳ ಆಟ ನಡೆಯಲೇ ಇಲ್ಲ. ಹೆದರಿ ಇಬ್ಬರು ಸ್ಥಳದಿಂದ ಓಡಿ ಹೋದ್ರು. ಆ ಕತ್ತಿಯನ್ನು ಬೀಸುತ್ತ ಅವರ ಬೆನ್ನಟ್ಟಿದ ಮನೆ ಮಾಲೀಕ, ಓರ್ವನನ್ನು ಹಿಡಿದಿದ್ದಾನೆ.

ಈ ವಿಡಿಯೋವನ್ನು ಫ್ಲೋರಿಡಾ ಪೊಲೀಸರು ಇಂಟರ್ನೆಟ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಐವರು ದರೋಡೆಕೋರರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಅಷ್ಟೇ ಅಲ್ಲ ಗನ್ ಹಿಡಿದಿದ್ದ ದುಷ್ಕರ್ಮಿಗಳನ್ನು, ಕತ್ತಿ ಹಿಡಿದು ಓಡಿಸಿದ ಮನೆ ಮಾಲೀಕನಿಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...