alex Certify
ಕನ್ನಡ ದುನಿಯಾ       Mobile App
       

Kannada Duniya

ಜಗಿದು ಬಿಸಾಡಿದ ಚೂಯಿಂಗ್ ಗಮ್ ನಲ್ಲೇ ತಯಾರಾಗಿದೆ ಬೂಟು

ಕೆಲ ವರ್ಷಗಳ ಹಿಂದೆ ಚೂಯಿಂಗ್ ಗಮ್ ಬಹಳ ಫೇಮಸ್ ಆಗಿತ್ತು. ಚೂಯಿಂಗ್ ಗಮ್ ಅಗಿಯೋದೇ ಒಂದು ರೀತಿಯ ಸ್ಟೈಲ್ ಆಗಿತ್ತು. ಕಾಲ ಬದಲಾದಂತೆ ಚೂಯಿಂಗ್ ಗಮ್ ಗೂ ಬೇಡಿಕೆ ಕಡಿಮೆಯಾಗಿದೆ. ಆದ್ರೂ ಜನ ಅದನ್ನು ಜಗಿದು ಕಂಡ ಕಂಡಲ್ಲಿ ಬಿಸಾಡೋ ಅಭ್ಯಾಸ ಬಿಟ್ಟಿಲ್ಲ.

ರಸ್ತೆಗಳಲ್ಲಿ, ಗೋಡೆಗಳಿಗೆ ಅಂಟಿಸೋದು ಇವೆಲ್ಲಾ ಕಾಮನ್. ಬ್ರಿಟನ್ ನ ಅನ್ನಾ ಬುಲ್ಲುಸ್ ಎಂಬುವವರು ಇದಕ್ಕೆ ಪರಿಹಾರ ಹುಡುಕಿದ್ದಾರೆ. ಇಂತಹ ಬಳಸಿ ಬಿಸಾಡಿದ ಚೂಯಿಂಗ್ ಗಮ್ ನಿಂದ ಬೂಟುಗಳನ್ನು ತಯಾರಿಸಿದ್ದಾರೆ. ಇದಕ್ಕಾಗಿ ಅನ್ನಾರ ಗಮ್ ಡ್ರಾಮ್ ಕಂಪನಿ ಎಕ್ಸ್ ಪ್ಲಿಸಿಟ್ ವೇರ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತ್ತು.

ಗಮ್ ಶೂ ಅಂತಾನೇ ಇದರ ಹೆಸರು. ಬೂಟಿನ ಸೋಲ್ ಅನ್ನು ಸಂಪೂರ್ಣ ಚೂಯಿಂಗ್ ಗಮ್ ನಿಂದ್ಲೇ ಮಾಡಲಾಗಿದೆ. ಅಂದ್ರೆ ಈ ಬೂಟಿನ ಶೇ.20ರಷ್ಟು ಭಾಗ ಬೇಡವಾದ ಚೂಯಿಂಗ್ ಗಮ್ ನಿಂದ ತಯಾರಾಗಿರೋದು ವಿಶೇಷ. ಪ್ರತಿ 4 ಜೊತೆ ಶೂಗಳಿಗೆ 1 ಕೆಜಿ ಚೂಯಿಂಗ್ ಗಮ್ ಬೇಕಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...