alex Certify
ಕನ್ನಡ ದುನಿಯಾ       Mobile App
       

Kannada Duniya

ಪಬ್ ಹೊರಗಡೆ ನಡೆದ ಆ ಫೈಟಿಂಗ್ ಡಬ್ಲ್ಯುಡಬ್ಲ್ಯುಇ ಗಿಂತ ಕಡಿಮೆ ಇರಲಿಲ್ಲ

ವಿದೇಶದ ಪಬ್ ಗಳಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ಹೊಡೆದಾಟ ಬಡಿದಾಟ ಕಾಮನ್. ದಿನನಿತ್ಯ ನಡೆಯೋ ಆ ರಗಳೆ ನಡೆಯೋವರೆಗೂ ನೋಡಿ ಆನಂತರ ಎಲ್ಲರೂ ಸುಮ್ಮನಾಗಿಬಿಡ್ತಾರೆ. ಆದ್ರೆ ಇಂಗ್ಲೆಂಡ್ ನಲ್ಲಿ ಪಬ್ ಒಂದರ ಹೊರಗೆ ನಡೆದಂತಾ ಫೈಟಿಂಗ್ ಇದೆಯಲ್ಲಾ ಸಾಮಾಜಿಕ ಜಾಲತಾಣದಿಂದಾಗಿ ವಿಶ್ವದಾದ್ಯಂತ ಫೇಮಸ್ ಆಗಿಬಿಟ್ಟಿದೆ.

ಇಂಗ್ಲೆಂಡ್ ನ ಬ್ರ್ಯಾಡ್ ಫೋರ್ಡ್ನ ಪಬ್ ಒಂದರ ಹೊರಗೆ ನಡೆದ ಮೇಲ್ ವರ್ಸಸ್ ಫೀಮೇಲ್ ಕಾದಾಟ ಡಬ್ಲ್ಯು ಡಬ್ಲ್ಯುಇ ಕಾದಾಟಕ್ಕಿಂತ ಕಡಿಮೆ ಏನು ಇರಲಿಲ್ಲ. ಎರಡೂವರೆ ನಿಮಿಷಗಳ ಕಾಲ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರೋ ಆ ಫೈಟಿಂಗ್ ನ ವಿಡಿಯೋ ನೋಡಿದ ಜನರು ವಿಡಿಯೋವನ್ನ ಯದ್ವಾತದ್ವಾ ಶೇರ್ ಮಾಡ್ತಿದ್ದಾರೆ. ಮೂವರು ಯುವತಿಯರು ಮತ್ತು ಓರ್ವ ಯುವಕನ ನಡುವೆ ನಡೆಯುವ ಈ ಫೈಟಿಂಗ್ ಕೇವಲ ಒಂದೇ ಗಂಟೆಯಲ್ಲಿ ಇಂಗ್ಲೆಂಡ್ ಪೂರಾ ಸುದ್ದಿಯಾಗಿಬಿಟ್ಟಿದೆ.

ಇಬ್ಬರ ನಡುವೆ ನಡೀತಿದ್ದ ಈ ಹೊಡೆದಾಟವನ್ನು ಬಿಡಿಸೋಕೆ ಬರುವ ಆ ಯುವತಿಯ ಗೆಳತಿಯರು ಕೂಡ ಕಾದಾಟದಲ್ಲಿ ಕೈ ಕೈ ಮಿಲಾಯಿಸಿಬಿಡ್ತಾರೆ. ಐದು ನಿಮಿಷಗಳ ಕಾಲ ನಡೆಯುವ ಈ ಕಾದಾಟ ಕೊನೆಗೆ ಮಹಿಳೆಯನ್ನ ಸಮಾಧಾನ ಮಾಡೋ ಮೂಲಕ ಮುಕ್ತಾಯವಾಗುತ್ತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...