alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೆ ಕನ್ನ ಹಾಕಿ ಅಲ್ಲೇ ಉಂಡು, ಸ್ನಾನಕ್ಕಿಳಿದಿದ್ದ ಭೂಪ

alg-burglar-jpg

ಉಂಡೂ ಹೋದ ಕೊಂಡೂ ಹೋದ ಅನ್ನೋದಕ್ಕೆ ಈ ಕಳ್ಳ ಬೆಸ್ಟ್ ಎಕ್ಸಾಂಪಲ್. ಅಮೆರಿಕದಲ್ಲಿ ಮಹಿಳೆಯೊಬ್ಬಳ ಮನೆಗೆ ಸರಿರಾತ್ರಿಯಲ್ಲಿ ಕನ್ನ ಹಾಕಿದ್ದ ಖದೀಮ ಅಲ್ಲೇ ಸ್ನಾನ, ಅಡುಗೆ ಎಲ್ಲವನ್ನೂ ಮುಗಿಸಿಕೊಂಡು ಹೋಗಿದ್ದಾನೆ. ಓಹಿಯೋ ನಗರದಲ್ಲಿರುವ ಮನೆಯೊಂದಕ್ಕೆ 33 ವರ್ಷದ ವ್ಯಕ್ತಿಯೊಬ್ಬ ಕನ್ನ ಹಾಕಿದ್ದ.

ಆ ಮನೆಯ ಒಡತಿ ರಾತ್ರಿ 12.15ರ ವೇಳೆಗೆ ಮನೆಗೆ ವಾಪಸ್ಸಾಗಿದ್ಲು. ಅಡುಗೆ ಮನೆಗೆ ಬರ್ತಿದ್ದಂತೆ ಆಕೆಗೆ ಶಾಕ್ ಕಾದಿತ್ತು. ಎಲ್ಲಾ ವಸ್ತುಗಳೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ವು. ಅಡುಗೆ ಮಾಡಿ ಅರ್ಧ ಬಳಸಿ ಅಲ್ಲೇ ಬಿಸಾಡಲಾಗಿತ್ತು. ಯಾರಿರಬಹುದು ಅಂತಾ ಗಾಬರಿಯಿಂದ ಆಕೆ ಹುಡುಕುತ್ತಿರುವಾಗ್ಲೇ ಮಹಡಿ ಮೇಲಿನ ಸ್ನಾನದ ಮನೆಯಲ್ಲಿ ನೀರಿನ ಶಬ್ಧ ಕೇಳಿಸ್ತಾ ಇತ್ತು.

ಅಲ್ಲಿ ಹೋಗಿ ನೋಡಿದ್ರೆ ಕಳ್ಳ ಆರಾಮಾಗಿ ಸ್ನಾನ ಮಾಡ್ತಾ ಇದ್ದ. ಕಿರುಚಿಕೊಂಡ ಆಕೆ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾಳೆ. ಕಳ್ಳತನ ಮಾಡಿದ್ದಲ್ಲದೇ ಅಲ್ಲೇ ಊಟ, ಸ್ನಾನ ಎಲ್ಲವನ್ನೂ ಮುಗಿಸಿದ್ದ ದುಷ್ಕರ್ಮಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...