alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ನೋಡಿ 0 ಸ್ಟಾರ್ ಹೋಟೆಲ್..!

The Zero Star Hotel In Switzerland Doesn't Have Walls Or A Ceiling But You Won't Be Complaining3 ಸ್ಟಾರ್, 5 ಸ್ಟಾರ್ ಹಾಗೂ 7 ಸ್ಟಾರ್ ಹೋಟೆಲ್ ಗಳ ಬಗ್ಗೆ ಕೇಳಿರುತ್ತೀರಿ. ಆದರೆ 0 ಸ್ಟಾರ್ ಹೋಟೆಲ್ ಇದೆ ಎಂದರೆ ನೀವು ನಂಬಲೇಬೇಕು. ಹಾಗೆಂದು 0 ಸ್ಟಾರ್ ಹೋಟೆಲ್ ನಲ್ಲಿ ಶ್ರೀಸಾಮಾನ್ಯರು ಉಳಿದುಕೊಳ್ಳುತ್ತಾರೆಂದು ಭಾವಿಸಬೇಡಿ. ಭಾರೀ ಶ್ರೀಮಂತರೇ 0 ಸ್ಟಾರ್ ಹೋಟೆಲ್ ರೂಂ ಅನ್ನು ಬುಕ್ ಮಾಡುತ್ತಾರೆ,

ಅಂದ ಹಾಗೇ ಈ ಹೋಟೆಲ್ ಇರುವುದು ಪ್ರಕೃತಿಯ ರಮಣೀಯ ತಾಣ ಸ್ವಿಜ್ಜರ್ಲ್ಯಾಂಡ್ ನಲ್ಲಿ. ಆಲ್ಫ್ಸ್ ಪರ್ವತದ ಬದಿಯಲ್ಲಿರುವ ಈ 0 ಸ್ಟಾರ್ ಹೋಟೆಲ್ ನಲ್ಲಿ ಬಟಾ ಬಯಲಿನಲ್ಲಿ ಕೇವಲ ಮಂಚವನ್ನು ಹಾಕಲಾಗಿರುತ್ತದೆ. ಅಕ್ಕಪಕ್ಕ ಗೋಡೆಗಳಿರುವುದಿಲ್ಲ. ಕಡೇ ಪಕ್ಷ ಛಾವಣಿಯೂ ಇದಕ್ಕಿಲ್ಲ. ಹಾಕಲಾಗಿರುವ ಮಂಚಕ್ಕೆ ಹೊಂದಿಕೊಂಡಂತೆ ಲೈಟ್ ವ್ಯವಸ್ಥೆ ಮಾಡಲಾಗಿರುತ್ತದೆ. ಟಾಯ್ಲೆಟ್ ಕೂಡಾ ಇರುವುದಿಲ್ಲ.

ಹಾಗೆಂದು ಬಯಲು ಬಹಿರ್ದೆಸೆ ಕಾರ್ಯಕ್ರಮವೇನಿರುವುದಿಲ್ಲ. ಕೇವಲ 10 ರಿಂದ 15 ನಿಮಿಷದ ನಡಿಗೆಯ ಬಳಿಕ ಟಾಯ್ಲೆಟ್ ಸಿಗುತ್ತದೆ. ಹಾಗೆಯೇ ನಿಮಗೆ ಬೇಕಾದ ಊಟೋಪಚಾರಗಳನ್ನು ಮಾಡಲು ಸಿಬ್ಬಂದಿಯೂ ಇರ್ತಾರೆ. ನೀವು ಆರ್ಡರ್ ಮಾಡಿದ ಕೆಲ ಸಮಯದಲ್ಲೇ ಆಹಾರ ನಿಮ್ಮ ಬೆಡ್ ಬಳಿ ಇರುತ್ತದೆ. 0 ಸ್ಟಾರ್ ಹೋಟೆಲ್ ಅಂದಾಕ್ಷಣ ಇದರ ದರವೇನೂ ಕಡಿಮೆಯಿಲ್ಲ. ಪ್ರಕೃತಿ ನಡುವೆ ಎಂಜಾಯ್ ಮಾಡಲೆಂಬ ಕಾರಣಕ್ಕೆ ಈ 0 ಸ್ಟಾರ್ ಹೋಟೆಲ್ ಅನ್ನು ರೂಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...