alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನಲ್ಲಿ ಅತಿ ಹೆಚ್ಚು ಕುಡುಕರಿರುವ ದೇಶಗಳ್ಯಾವುವು ಗೊತ್ತಾ?

ಅಲ್ಕೋಹಾಲ್ ಸೇವನೆಯ ಪ್ರಮಾಣ ಬೇರೆ ಬೇರೆ ದೇಶಗಳಲ್ಲಿ ಭಿನ್ನವಾಗಿದೆ. ಆಯಾ ದೇಶಗಳ ಸಂಸ್ಕೃತಿ, ಸಂಪ್ರದಾಯಗಳಿಗೆ ಅನುಗುಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿ ಮಾಡಿರುವ ವಿಶ್ವದಲ್ಲೇ ಅತಿ ಹೆಚ್ಚು ಮದ್ಯ ಸೇವಿಸುವ ರಾಷ್ಟ್ರಗಳು ಯಾವುವು ಅನ್ನೋದನ್ನು ನೋಡೋಣ.

ಬೆಲಾರಸ್ : ಇಲ್ಲಿ ಸರಾಸರಿ 15 ಲೀಟರ್ ಮದ್ಯ ಸೇವನೆ ಮಾಡಲಾಗ್ತಿದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿನ ನಾಗರಿಕರು ಸ್ಪಿರಿಟ್ ಕುಡಿಯುತ್ತಾರೆ.

ಲಿಥೂನಿಯಾ : 2000ನೇ ಇಸ್ವಿಯಿಂದ್ಲೂ ಇಲ್ಲಿ ಮದ್ಯಪಾನಿಗಳ ಸಂಖ್ಯೆ ಏರುತ್ತಲೇ ಇದೆ. ಈಗ ಸರಾಸರಿ ಮದ್ಯ ಸೇವನೆ ಪ್ರಮಾಣ 14.5 ಲೀಟರ್ ನಷ್ಟಾಗಿದೆ.

ಜೆಕ್ ಗಣರಾಜ್ಯ : ಇಲ್ಲಿ ಸರಾಸರಿ ಮದ್ಯ ಸೇವನೆ ಪ್ರಮಾಣ 12.5-13.5 ಲೀಟರ್ ನಷ್ಟಿದೆ. ಇಲ್ಲಿ ಬಿಯರ್ ಅತ್ಯಂತ ಫೇಮಸ್ ಆಗಿದೆ.

ಫ್ರಾನ್ಸ್ : 2000ನೇ ಇಸ್ವಿಯಿಂದ್ಲೂ ಫ್ರಾನ್ಸ್ ನಲ್ಲಿ ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2012ರ ವೇಳೆಗೆ ಸರಾಸರಿ ಮದ್ಯ ಸೇವನೆ ಪ್ರಮಾಣ 7 ಲೀಟರ್ ನಷ್ಟಿತ್ತು.

ಐರ್ಲೆಂಡ್ : 2004ರಲ್ಲಿ ಐರ್ಲೆಂಡ್ ನಲ್ಲಿ ಸರಾಸರಿ ಮದ್ಯ ಸೇವನೆ 14.24 ಲೀಟರ್ ನಷ್ಟಿತ್ತು. ನಂತರ ಈ ಪ್ರಮಾಣ ಇಳಿಕೆಯಾಗಿದೆ. ಅತಿ ಹೆಚ್ಚು ಬಿಯರ್ ಕುಡಿಯುವ ರಾಷ್ಟ್ರಗಳಲ್ಲಿ ಐರ್ಲೆಂಡ್ ಎರಡನೆಯದು.

ಲಕ್ಸೆಂಬರ್ಗ್ : ಇದು ಅತಿ ಚಿಕ್ಕ ರಾಷ್ಟ್ರ, ಜನಸಂಖ್ಯೆ ಕೇವಲ 555,000. ಆದ್ರೆ ಮದ್ಯ ಸೇವನೆಯಲ್ಲಿ ಮಾತ್ರ ಇವರು ಮುಂದಿದ್ದಾರೆ. ಇಲ್ಲಿ ವೈನ್ ಅತ್ಯಂತ ಜನಪ್ರಿಯ ಪಾನೀಯ.

ಹಂಗೇರಿ : 2006ರಲ್ಲಿ ಹಂಗೇರಿಯಲ್ಲಿ ಅತಿ ಹೆಚ್ಚು ಕುಡುಕರಿದ್ರು. ನಂತರ ಈ ಪ್ರಮಾಣ ಕಡಿಮೆಯಾಗಿದೆ. ವೈನ್, ಬಿಯರ್ ಮತ್ತು ಸ್ಪಿರಿಟ್ ಇವರ ಫೇವರಿಟ್.

ರಷ್ಯಾ : ರಷ್ಯಾದ ಮಂದಿ ಕೂಡ ಸ್ಪಿರಿಟ್ ಇಷ್ಟಪಡ್ತಾರೆ. ಅದನ್ನು ಬಿಟ್ರೆ ವೈನ್ ಹೀರ್ತಾರೆ. ರಷ್ಯಾ ವೋಡ್ಕಾಗೆ ಪ್ರಸಿದ್ಧಿ ಪಡೆದಿದೆ, ಆದ್ರೆ ಅಲ್ಲಿನ ಜನರು ಮಾತ್ರ ಅಷ್ಟಾಗಿ ಅದನ್ನು ಕುಡಿಯುತ್ತಿಲ್ಲ.

ಜರ್ಮನಿ : ಕಳೆದ ಒಂದು ದಶಕದಿಂದ ಜರ್ಮನಿಯ ಜನತೆ ವರ್ಷದಿಂದ ವರ್ಷಕ್ಕೆ ಕುಡಿತ ಕಡಿಮೆ ಮಾಡುತ್ತಿದ್ದಾರೆ. ಆದ್ರೆ 2007ರಲ್ಲಿ ಮಾತ್ರ ಮದ್ಯಪ್ರಿಯರ ಸಂಖ್ಯೆ ಅತ್ಯಧಿಕವಾಗಿತ್ತು.

ಸ್ಲೋವಾಕಿಯಾ : ಇಲ್ಲಿ 2012ರ ವೇಳೆಗೆ ಸರಾಸರಿ ಮದ್ಯಪಾನ ಪ್ರಮಾಣ 10.76 ಲೀಟರ್ ಇತ್ತು. ಇವರು ಬಿಯರ್, ವೈನ್ ಗಿಂತ ಹೆಚ್ಚಾಗಿ ಸ್ಪಿರಿಟ್ ಇಷ್ಟಪಡ್ತಾರೆ.

ಲಾಟ್ವಿಯಾ : ಈ ದೇಶದಲ್ಲಿ ಕೂಡ 2007ರ ನಂತರ ಕುಡುಕರ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಆದ್ರೆ ಮದ್ಯಪ್ರಿಯರೆಲ್ಲ ಬಿಯರ್ ಮೊರೆಹೋಗ್ತಿದ್ದಾರೆ.

ಪೋಲೆಂಡ್ : ಇವರು ಕೂಡ ಬಿಯರ್ ಪ್ರಿಯರು. 2012ರ ವೇಳೆಗೆ ಇಲ್ಲಿ ಸರಾಸರಿ ಒಬ್ಬ ವ್ಯಕ್ತಿ 6.9 ಲೀಟರ್ ಮದ್ಯ ಸೇವಿಸುತ್ತಿದ್ದ. 2013ರ ವೇಳೆಗೆ ಈ ಪ್ರಮಾಣ 4.13ಕ್ಕೆ ಇಳಿಕೆಯಾಗಿದೆ.

ಆಸ್ಟ್ರೇಲಿಯಾ : ಇಲ್ಲಿ 2000ನೇ ಇಸ್ವಿ ನಂತರ ಮದ್ಯಪ್ರಿಯರ ಸಂಖ್ಯೆ ಭಾರೀ ಕಡಿಮೆಯಾಗಿದೆ. ಆದ್ರೀ ಆಸೀಸ್ ಮಂದಿಗೂ ಬಿಯರ್ ಇಷ್ಟ.

ಸ್ವಿಡ್ಜರ್ಲೆಂಡ್ : ಪ್ರವಾಸಿಗರ ಸ್ವರ್ಗದಲ್ಲೂ ಕುಡುಕರ ಸಂಖ್ಯೆ ಕಡಿಮೆಯೇನಿಲ್ಲ. ಆದ್ರೂ 2000ನೇ ಇಸ್ವಿಯ ನಂತರ ಮದ್ಯ ಸೇವನೆ ಪ್ರಮಾಣ ಕೊಂಚ ಕಡಿಮೆಯಾಗಿದೆ. ಇಲ್ಲಿನ ಜನ ಹೆಚ್ಚಾಗಿ ವೈನ್ ಇಷ್ಟಪಡ್ತಾರೆ.

ಬೆಲ್ಜಿಯಂ : ಇಲ್ಲಿನ ಜನರಿಗೆ ಬಿಯರ್ ಅಂದ್ರೆ ಪಂಚಪ್ರಾಣ. ವೈನ್ ಗಿಂತ ಹೆಚ್ಚಾಗಿ ಬಿಯರ್ ಸೇವಿಸ್ತಾರೆ.

ಬ್ರಿಟನ್ : ಇಲ್ಲಿ ಒಟ್ಟಾರೆ ಮದ್ಯಪ್ರಿಯರ ಸಂಖ್ಯೆ ಕಡಿಮೆಯಾಗ್ತಿದೆ. 2004ರಲ್ಲಿ ಸರಾಸರಿ 11.73 ಲೀಟರ್ ಮದ್ಯಪಾನ ಮಾಡುತ್ತಿದ್ದ ಬ್ರಿಟನ್ ಪ್ರಜೆಗಳು, 2012ರ ವೇಳೆಗೆ ಈ ಪ್ರಮಾಣವನ್ನು 9.65 ಲೀಟರ್ ಗೆ ಇಳಿಕೆ ಮಾಡಿದ್ದಾರೆ.

ಫಿನ್ ಲ್ಯಾಂಡ್ : 2007ರಲ್ಲಿ ಫಿನ್ ಲ್ಯಾಂಡ್ ನಲ್ಲಿ ಪ್ರತಿಯೊಬ್ಬರೂ ಸರಾಸರಿ 10.45 ಲೀಟರ್ ಸುರಪಾನ ಮಾಡುತ್ತಿದ್ರು. ಆದ್ರೆ ನಂತರ ಈ ಪ್ರಮಾಣ ಕೊಂಚ ಕಡಿಮೆಯಾಗಿದೆ.

ಡೆನ್ಮಾರ್ಕ್ : 2012ರಲ್ಲಿ ಡೆನ್ಮಾರ್ಕ್ ನಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಕಡಿಮೆಯಾಗಿತ್ತು. ಆದ್ರೆ 2013ರ ವೇಳೆಗೆ ಮತ್ತೆ ಕುಡುಕರ ಪ್ರಮಾಣ ಹೆಚ್ಚಾಗಿದೆ.

ನ್ಯೂಜಿಲೆಂಡ್ : 2000ನೇ ಇಸ್ವಿ ವೇಳೆಗೆ ಕಿವೀಸ್ ನಲ್ಲಿ ವ್ಯಕ್ತಿಯೊಬ್ಬ ಸರಾಸರಿ 10 ಲೀಟರ್ ಮದ್ಯ ಸೇವಿಸುತ್ತಿದ್ದ. ಆದ್ರೆ 2010ರ ನಂತರ ಈ ಪ್ರಮಾಣ ಇಳಿಕೆಯಾಗಿದೆ. ಅತ್ಯಂತ ಶ್ರೇಷ್ಠ ಗುಣಮಟ್ಟದ ವೈನ್ ಗೂ ಇದು ಹೆಸರುವಾಸಿ.

ಅಮೆರಿಕ : ಅಮೆರಿಕ ಕುಡುಕರ ಸಾಮ್ರಾಜ್ಯ. 2000ನೇ ಇಸ್ವಿಯಿಂದ್ಲೂ ಇಲ್ಲಿ ಮದ್ಯಪ್ರಿಯರದ್ದೇ ದರ್ಬಾರು. ಇಲ್ಲಿ ಒಬ್ಬ ವ್ಯಕ್ತಿ ಸರಾಸರಿ 8 ಲೀಟರ್ ಮದ್ಯ ಸೇವಿಸ್ತಾನೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...