alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನ ಬೆಸ್ಟ್ ಸಿಟಿ ಯಾವುದು ಗೊತ್ತಾ…?

ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ಜಗತ್ತಿನಲ್ಲಿ ಅತ್ಯಂತ ಗುಣಮಟ್ಟದ ಜೀವನ ನೀಡುವ ನಗರ ಎನಿಸಿಕೊಂಡಿದೆ. ಮರ್ಸರ್ ನಡೆಸಿರೋ ವಾರ್ಷಿಕ ಸಮೀಕ್ಷೆ ಪ್ರಕಾರ ಇರಾಕ್ ನ ಬಾಗ್ದಾದ್ ಅತ್ಯಂತ ಕೆಟ್ಟ ನಗರ. ಒಟ್ಟು 231 ನಗರಗಳಲ್ಲಿರುವ ಶಿಕ್ಷಣ ವ್ಯವಸ್ಥೆ, ಹೆಲ್ತ್ ಕೇರ್, ಮನರಂಜನೆ, ಸಾರಿಗೆ ವ್ಯವಸ್ಥೆ, ಅಪರಾಧಗಳ ಸಂಖ್ಯೆ ಇವನ್ನೆಲ್ಲ ಪರೀಕ್ಷಿಸಿ ಪಟ್ಟಿ ಮಾಡಲಾಗಿದೆ.

ವಿಶ್ವದ ಟಾಪ್ 10 ಬೆಸ್ಟ್ ನಗರಗಳ ಪೈಕಿ 8 ಸಿಟಿಗಳು ಯುರೋಪ್ ನಲ್ಲಿವೆ. ಜರ್ಮನಿ ಹಾಗೂ ಸ್ವಿಡ್ಜರ್ಲೆಂಡ್ ನಲ್ಲಿ ತಲಾ 3, ನ್ಯೂಜಿಲೆಂಡ್, ಕೆನಡಾ ಹಾಗೂ ಆಸ್ಟ್ರೇಲಿಯಾದ ತಲಾ ಒಂದೊಂದು ನಗರಗಳು ಬೆಸ್ಟ್ ಎನಿಸಿಕೊಂಡಿವೆ.

1.8 ಮಿಲಿಯನ್ ಜನಸಂಖ್ಯೆ ಹೊಂದಿರೋ ವಿಯೆನ್ನಾ ಸತತ 9ನೇ ವರ್ಷವೂ ಅಗ್ರಸ್ಥಾನ ಕಾಯ್ದುಕೊಂಡಿದೆ. ಅಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆ, ಸಮಗ್ರ ಆರೋಗ್ಯ ಹಾಗೂ ಮಧ್ಯಮ ವಸತಿ ವೆಚ್ಚ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ವಿಡ್ಜರ್ಲೆಂಡ್ ನ ಜುರಿಚ್, ನ್ಯೂಜಿಲೆಂಡ್ ನ ಆಕ್ಲೆಂಡ್ ಹಾಗೂ ಜರ್ಮನಿಯ ಮುನಿಚ್ ಕೂಡ ವಾಸಕ್ಕೆ ಅತ್ಯಂತ ಯೋಗ್ಯವಾದ ನಗರಗಳು. ಅತ್ಯಂತ ಗುಣಮಟ್ಟದ ಜೀವನಕ್ಕೆ ಉತ್ತರ ಅಮೆರಿಕಾ ಬೆಸ್ಟ್ ಅಂತಾ ಸಮೀಕ್ಷೆ ಹೇಳಿದೆ. ದೆಹಲಿಯ ವಾಯು ಮಾಲಿನ್ಯ ಹಾಗೂ ಮುಂಬೈನ ಟ್ರಾಫಿಕ್ ಭಾರತವನ್ನು ಈ ಪಟ್ಟಿಯಿಂದ ಹೊರಗಿಟ್ಟಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...