alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಸುಗುಟ್ಟಿಯೇ ಕೋಟ್ಯಾಧಿಪತಿಯಾಗಿದ್ದಾಳೆ ಈ ಯುವತಿ

ಹೆಚ್ಚು ಹೆಚ್ಚು ಸಂಪಾದಿಸಬೇಕೆಂದರೆ ಒಂದೊಳ್ಳೆಯ ಕೆಲಸ ಇರಬೇಕು ಅಥವಾ ದೊಡ್ಡ ಉದ್ಯಮ ಇರಬೇಕು. ಆದರೆ ಇಲ್ಲೊಬ್ಬಳು ಯುವತಿ ಅಂಥದ್ದೇನೂ ಇರದೆ ವರ್ಷಕ್ಕೆ ಲಕ್ಷಗಟ್ಟಲೆ ಸಂಪಾದಿಸುತ್ತಿದ್ದಾಳೆ.

ಅಷ್ಟಕ್ಕೂ ಆಕೆ ಮಾಡುತ್ತಿರುವುದೇನು ಎಂಬುದನ್ನು ತಿಳಿದರೆ ಅಚ್ಚರಿ ಆಗಲೇಬೇಕು. ಏಕೆಂದರೆ ಬರೀ ಪಿಸುಗುಟ್ಟುವುದರಿಂದಲೇ ಆಕೆ ಕೋಟ್ಯಾಧಿಪತಿಯಾಗಿದ್ದಾಳೆ.

ಇಂಗ್ಲೆಂಡ್‍ ನ ಚೆಸೈರ್‍ನಲ್ಲಿರುವ ಸೋಫಿ ಮಿಶೆಲ್ಲೆ ಎಂಬ 21 ವರ್ಷದ ಈ ಯುವತಿ ಅತಿ ಕಡಿಮೆ ಕೆಲಸ ಮಾಡಿ ಅತಿ ಹೆಚ್ಚು ಸಂಪಾದನೆ ಮಾಡುತ್ತಿದ್ದಾಳೆ. ಬರೀ ಪಿಸುಗುಟ್ಟುವುದನ್ನೇ ವಿಡಿಯೋ ಮಾಡಿ ಆಕೆ ಹಂಚಿಕೊಳ್ಳುತ್ತಿದ್ದು, ಅವು ಲಕ್ಷಗಟ್ಟಲೆ ವೀಕ್ಷಣೆಗೆ ಒಳಗಾಗುತ್ತಿರುವ ಜೊತೆಗೆ ಆಕೆಗೆ ಲಕ್ಷಗಟ್ಟಲೆ ಹಣವನ್ನೂ ತಂದುಕೊಡುತ್ತಿವೆ.

ಆಕೆಯ ಈ ಪಿಸುಗುಟ್ಟುವಿಕೆ ಆಟೋನಾಮಸ್ ಸೆನ್ಸರಿ ಮೆರಿಡಿಯನ್ ರೆಸ್ಪಾನ್ಸ್(ಎಎಸ್‍ಎಮ್‍ಆರ್)ಗೆ ಬಳಸಲಾಗುತ್ತಿದೆ. ಅಂದರೆ ಈ ವಿಡಿಯೊಗಳು ನಿದ್ರೆ ಪ್ರಚೋದಕವಾಗಿ ಕೆಲಸ ಮಾಡುತ್ತವೆ. ಸೋಫಿ ಈ ಮೂಲಕ ಜಗತ್ತಿನ ಜನಪ್ರಿಯ ಎಎಸ್‍ಎಮ್‍ಆರ್ ಆರ್ಟಿಸ್ಟ್ ಆಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...