alex Certify
ಕನ್ನಡ ದುನಿಯಾ       Mobile App
       

Kannada Duniya

ಪುನರ್ಜನ್ಮದ ನಂಬಿಕೆಗೆ ಸಿರಿವಂತರು ಕಟ್ಟುತ್ತಿದ್ದಾರೆ 71 ಲಕ್ಷ ರೂಪಾಯಿ…!

ಹುಟ್ಟಿದ ಮೇಲೆ ಸಾವು ಶತಸಿದ್ಧ. ಅದೇ ರೀತಿ ಜಗತ್ತಿನಲ್ಲಿ ಪುನರ್ಜನ್ಮವನ್ನು ನಂಬುವಂತಾ ಅನೇಕ ಜನರಿದ್ದಾರೆ. ಅವರ ನಂಬಿಕೆಗೆ ಅನುಗುಣವಾಗಿ ನಡೆಯುತ್ತಿರೋ ವೈದ್ಯಕೀಯ ಸಂಶೋಧನೆ ಈಗ ತುಂಬಾನೇ ಮಹತ್ವ ಪಡೆದುಕೊಳ್ತಿದೆ. ಪುನರ್ಜನ್ಮದ ಮೇಲೆ ನಂಬಿಕೆ ಇರುವಂತಾ ಸಿರಿವಂತರು ತಮ್ಮ ಮೆದುಳನ್ನು 200 ವರ್ಷಗಳವರೆಗೆ ಸುರಕ್ಷಿತವಾಗಿ ಇಡೋದಕ್ಕಾಗಿ 71 ಲಕ್ಷ ರೂಪಾಯಿಗಳನ್ನ ಖರ್ಚು ಮಾಡ್ತಿದ್ದಾರಂತೆ.

ಹೌದು….ಈ ವಿಚಾರ ಕೇಳೋದಕ್ಕೆ ಹಾಲಿವುಡ್ ನ ಸೈನ್ಸ್ ಫಿಕ್ಷನ್ ಸಿನಿಮಾದ ಕತೆಯ ಹಾಗಿದ್ದರು ಇದು ನಿಜ ಸಂಗತಿ. ಖಾಯಿಲೆಯಿಂದ ಮಡಿದ ಅಥವಾ ಸಹಜವಾಗಿ ಮಡಿದವರ ಮೆದುಳುಗಳ ಮೇಲೆ ಈ ಪ್ರಯೋಗ ನಡೆಸಲು ಸಾಧ್ಯವಾಗ್ತಿಲ್ಲ. ಆದ್ರೆ ಕೆಲ ಸಿರಿವಂತರು ಪುನರ್ಜನ್ಮದ ಮೇಲೆ ಅತಿಯಾದ ನಂಬಿಕೆ ಇರುವ ಕಾರಣ ಮೆದುಳುಗಳನ್ನು ಸಂರಕ್ಷಿಸಿ ಇಡುವಂತೆ ವೈದ್ಯ ವಿಜ್ಞಾನಿಗಳ ಜೊತೆ ಒಪ್ಪಂದಕ್ಕಿಳಿದಿದ್ದಾರಂತೆ.

ಕ್ರಯೋಜೆನಿಕ್ಸ್ ವಿಧಾನದ ಮೂಲಕ ಇಡೀ ದೇಹ ಅಥವಾ ದೇಹದ ಪ್ರಮುಖ ಭಾಗಗಳನ್ನ ಸಂರಕ್ಷಿಸಿಡುವ ಈ ಪದ್ಧತಿಗೆ ಹಣ ಹೂಡೋದಕ್ಕೆ ಈಗ ವಿಶ್ವದ ಖ್ಯಾತನಾಮರು ಮುಂದಾಗಿದ್ದಾರಂತೆ. ಆದ್ರೆ ಪರಿಣತರು ಹೇಳುವ ಪ್ರಕಾರ ಹೀಗೊಂದು ನಂಬಿಕೆ ವಾಸ್ತವ ರೂಪದಲ್ಲಿ ಜಾರಿಯಾಗೋದಕ್ಕೆ ಸಾಧ್ಯವಿಲ್ಲವಂತೆ.

ಹೃದಯ ಮತ್ತು ಕಿಡ್ನಿಯ ಜೀವಕೋಶಗಳನ್ನು ದೀರ್ಘಕಾಲ ಸಂರಕ್ಷಿಸಿಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಸಾವಿನಿಂದ ವ್ಯಕ್ತಿಯನ್ನು ಪಾರು ಮಾಡುವ ಮಟ್ಟಿಗೆ ವೈದ್ಯ ವಿಜ್ಞಾನ ಬೆಳೆಯಬಹುದು. ಆದ್ರೆ ಭವಿಷ್ಯದ ವೈದ್ಯಕೀಯ ವಿಜ್ಞಾನದ ಪ್ರಾಯೋಗಿಕತೆಯ ಮೇಲೆ ಪುನರ್ಜನ್ಮದ ಕತೆಯನ್ನು ಸಂಪೂರ್ಣವಾಗಿ ನಂಬುವುದು ಸಾಧ್ಯವಿಲ್ಲ ಅಂತಿದ್ದಾರೆ ವೈದ್ಯ ವಿಜ್ಞಾನಿಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...