alex Certify
ಕನ್ನಡ ದುನಿಯಾ       Mobile App
       

Kannada Duniya

ಇದ್ದರೆ ಇರಬೇಕು ಇಂತಹಾ ಸಹೋದ್ಯೋಗಿಗಳು

ಅಲ್ಲಿ ಸಂಭ್ರಮ ಸಡಗರ….ಎಲ್ಲರೂ ಸೇರಿ ಸಹೋದ್ಯೋಗಿಯ ಹುಟ್ಟು ಹಬ್ಬ ಆಚರಿಸಿದ್ರು. ತಮ್ಮ ಜೊತೆ ಕೆಲಸ ಮಾಡುವ ಉದ್ಯೋಗಿಯ ಕಷ್ಟವನ್ನು ಅರಿತು, ಆತನಿಗೆ ಬೆಸ್ಟ್ ಗಿಫ್ಟ್ ನೀಡಿದ್ದಾರೆ.

ಅಮೆರಿಕದ ಬಜಾಜ್ ಗ್ರಿಲ್ ನ ಮ್ಯಾಕ್ಸಿಕನ್ ಫುಡ್ ರೆಸ್ಟೋರೆಂಟ್ ನಲ್ಲಿ ಟೋಲರ್, ಎರಡು ವರ್ಷಗಳಿಂದ ಕೆಲಸ ಮಾಡ್ತಾ ಇದ್ದರು. ಕೆಲಸಕ್ಕೆ ಬರಲು ಇವರ ಬಳಿ ಸ್ವಂತ ಕಾರ್ ಇರಲಿಲ್ಲ. ಬಸ್ ಹಾಗೂ ಇತರೆಯವರಿಂದ ಲಿಫ್ಟ್ ಪಡೆದು ಬರುತ್ತಿದ್ದರು. ಇದನ್ನು ಮನಗಂಡು ಸಹೋದ್ಯೋಗಿಗಳು ಟ್ರೋಲರ್ ಗೆ ಹುಟ್ಟು ಹಬ್ಬದ ದಿನ ಕಾರ್ ಗಿಫ್ಟ್ ನೀಡಿದ್ದಾರೆ.

ಕಾರ್ ಕೀ ಕಂಡು ಆಶ್ಚರ್ಯಚಕಿತರಾದ ಟ್ರೋಲರ್ ಕಣ್ಣಂಚಲಿ ನೀರು ತುಂಬಿತ್ತು. ತಮ್ಮ ಬಹು ದಿನದ ಕನಸು ನನಸಾದ ಸಂತಸ ಒಂದು ಕಡೆ ಆದ್ರೆ, ಧನ್ಯತಾ ಭಾವ ಇನ್ನೊಂದೆಡೆ. ಟ್ರೋಲರ್ ಗೆ ಕಾರ್ ನೀಡುವ ಪ್ಲಾನ್ ಎಲ್ಲರು ಸೇರಿ ತೀರ್ಮಾನಿಸಿದ್ದರು. ಫೇಸ್ ಬುಕ್ ನಲ್ಲಿ ಈ ವಿಡಿಯೋ ಅಪ್ ಲೋಡ್ ಮಾಡಿದಾಗಿನಿಂದಲೂ 25 ಸಾವಿರ ಜನ ನೋಡಿದ್ದು, 100 ಕ್ಕೂ ಹೆಚ್ಚು ಜನ ಕಮೆಂಟ್ ಮಾಡಿದ್ದಾರೆ.

This awesome staff came together & surprised our wonderful nighttime host with a car! Good people doing something nice for another good person. ♥️

Posted by Baja Grill on Monday, September 10, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...