alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಫೋನ್ ನಲ್ಲಿನ ಫ್ಲೈಟ್ ಮೋಡ್ ಬಗ್ಗೆ ಗೊತ್ತಾ…?

flight-pilot

ಸಾಮಾನ್ಯವಾಗಿ ಎಲ್ಲಾ ಫೋನ್ ಗಳಲ್ಲಿ ಫ್ಲೈಟ್ ಮೋಡ್ ಇರುವುದನ್ನು ಗಮನಿಸಿರುತ್ತೀರಿ. ಈ ಫ್ಲೈಟ್ ಮೋಡ್ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.

ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ನಿಮ್ಮ ಫೋನ್ ಅನ್ನು ಫ್ಲೈಟ್ ಮೋಡ್ ಗೆ ಬದಲಿಸಬೇಕು. ಸಾಮಾನ್ಯ ನೆಟ್ ವರ್ಕ್ ನಿಂದ ಫ್ಲೈಟ್ ಮೋಡ್ ಗೆ ಬದಲಿಸಿದಾಗ, ವೈಫೈ ಸೇರಿದಂತೆ ಯಾವುದೇ ಕನೆಕ್ಷನ್ ಇರುವುದಿಲ್ಲ.

ಈಗ ಹೆಚ್ಚು ಕಡಿಮೆ ವಿಮಾನ ಪ್ರಯಾಣ ಸಾಮಾನ್ಯವಾದಂತಾಗಿದೆ. ಫೋನ್ ಬಳಸುವವರ ಸಂಖ್ಯೆಯೂ ಹೆಚ್ಚಿದೆ. ಎಲ್ಲಿಗೆ ಹೋದರೂ, ಫೋನ್ ಅನಿವಾರ್ಯ ಎನ್ನುವಂತಾಗಿದೆ. ಕೆಲವರಂತೂ ವಿಮಾನದಲ್ಲಿದ್ದರೂ, ಫೋನ್ ಬಳಸುತ್ತಾರೆ. ಇದರಿಂದ ಪೈಲಟ್ ಗಳಿಗೆ ತೊಂದರೆಯಾಗುತ್ತದೆ. ವಿಮಾನ ಹಾರಾಟ ಮಾರ್ಗ, ಲ್ಯಾಂಡಿಂಗ್, ಮೊದಲಾದವುಗಳ ಬಗ್ಗೆ ಸೆಟ್ ಲೈಟ್ ಮೂಲಕ ಪೈಲಟ್ ಗಳು ಸಂಪರ್ಕ ಹೊಂದಿರುತ್ತಾರೆ.

ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಹೆಚ್ಚಾಗಿ, ನಿಮ್ಮ ಫೋನ್ ಅನ್ನು ಫ್ಲೈಟ್ ಮೋಡ್ ಗೆ ಬದಲಿಸಿ ಇಲ್ಲವೇ ಸ್ವಿಚ್ ಆಫ್ ಮಾಡಿ ಎಂದು ಸೂಚನೆ ಕೊಡುತ್ತಾರೆ. ಫೋನ್ ಬಳಸಿದರೆ, ಪೈಲಟ್ ಗಳು ಸಂಪರ್ಕ ಸಾಧಿಸಲು ತಾಂತ್ರಿಕ ತೊಂದರೆ ಆಗುತ್ತದೆ. ಹಾಗಾಗಿ ಫ್ಲೈಟ್ ಮೋಡ್ ಗೆ ನಿಮ್ಮ ಫೋನ್ ಬದಲಿಸಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...