alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಸನ್ನೆಯಿಂದ್ಲೇ ಅನ್ ಲಾಕ್ ಆಗುತ್ತೆ ಸ್ಮಾರ್ಟ್ ಫೋನ್ !

eye

ಐಫೋನ್ ಗೆ ಈಗ 10ನೇ ವರ್ಷದ ಹುಟ್ಟುಹಬ್ಬದ ಸಡಗರ. ಐಫೋನ್-8 ಮಾರುಕಟ್ಟೆಗೆ ಬರುವವರೆಗೂ ಆಪಲ್ ಕಂಪನಿಯ ಸಡಗರಕ್ಕೆ ಬ್ರೇಕ್ ಬೀಳುವುದಿಲ್ಲ. ಯಾಕಂದ್ರೆ ಐಫೋನ್-8 ಬಗ್ಗೆ ಗ್ರಾಹಕರಲ್ಲಿ ಅಪಾರ ನಿರೀಕ್ಷೆಗಳಿವೆ.

ಅದಕ್ಕೆ ತಕ್ಕಂತೆ ಐಫೋನ್-8 ರಲ್ಲಿ ಸ್ಯಾಮ್ ಸಂಗ್ ಡಿಸ್ ಪ್ಲೇನ ‘OLED’ ಪ್ಯಾನಲ್ ಗಳನ್ನು ಅಳವಡಿಸಲಾಗ್ತಿದೆ. ವೈರ್ ಲೆಸ್ ಚಾರ್ಜಿಂಗ್ ಕೂಡ ಮತ್ತೊಂದು ವಿಶೇಷ ಫೀಚರ್. ಇದಲ್ಲದೆ ಐರಿಸ್ ಟೆಕ್ನಾಲಜಿ ಕೂಡ ಇರಲಿದೆ ಅಂತಾ ಮೂಲಗಳು ತಿಳಿಸಿವೆ.

ಐರಿಸ್ ಸ್ಕ್ಯಾನಿಂಗ್ ಟೆಕ್ನಾಲಜಿ ಅಳವಡಿಸಲು ಆಪಲ್ ಕಂಪನಿ ಚಿಪ್ ಮತ್ತು ಕಂಪೋನೆಂಟ್ ಪೂರೈಕೆದಾರರಿಗೆ ಈಗಾಗ್ಲೇ ರಿಕ್ವೆಸ್ಟ್ ಕಳಿಸಿದೆ.  ಆ ತಂತ್ರಜ್ಞಾನವನ್ನು ಅಳವಡಿಸಿದ್ದೇ ಆದಲ್ಲಿ ಐಫೋನ್-8 ಅನ್ನು ನೀವು ಕೇವಲ ಒಂದು ಕಣ್ಸನ್ನೆಯಿಂದ್ಲೇ ಅನ್ ಲಾಕ್ ಮಾಡಬಹುದು. 2017 ರ ಮಧ್ಯಂತರದಲ್ಲಿ ಅವುಗಳ ತಯಾರಿಕೆ ಆರಂಭವಾಗಲಿದೆ. ಸ್ಯಾಮ್ ಸಂಗ್ ನ ಗ್ಯಾಲಕ್ಸಿ ಎಸ್8 ಮೊಬೈಲ್ ಗಳಲ್ಲೂ ಐರಿಸ್ ತಂತ್ರಜ್ಞಾನ ಅಳವಡಿಸುವ ಸಾಧ್ಯತೆಗಳಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...