alex Certify
ಕನ್ನಡ ದುನಿಯಾ       Mobile App
       

Kannada Duniya

ಬುರ್ಖಾ ತೆಗೆದು ಸಂಭ್ರಮಿಸಿದ ಯುವತಿ

isis j 18

ಡಮಾಸ್ಕಸ್: ತಮ್ಮ ಕರಾಳ ಕೃತ್ಯಗಳ ಮೂಲಕ ವಿಶ್ವದ ನೆಮ್ಮದಿಗೆ ಭಂಗ ತಂದಿರುವ ಐಸಿಸ್ ಉಗ್ರರು, ತಮ್ಮ ಪ್ರಾಬಲ್ಯ ಇರುವ ಪ್ರದೇಶಗಳಲ್ಲಿ ತಮ್ಮದೇ ಕಾನೂನು, ಕಟ್ಟಳೆಗಳನ್ನು ಒತ್ತಾಯದಿಂದ ಹೇರುವುದು ಸಾಮಾನ್ಯವಾಗಿದೆ. ಐಸಿಸ್ ಕ್ರೂರತೆಗೆ ಹೆದರಿ ಜನ ಅನಿವಾರ್ಯವಾಗಿ ಅವರು ಹೇಳಿದ್ದನ್ನು ಮಾಡುತ್ತಾರೆ.

 

ಐಸಿಸ್ ಹೇಳಿದಂತೆ ಕೇಳದವರನ್ನು ಸಾರ್ವಜನಿಕವಾಗಿ ಶಿಕ್ಷಿಸುವ ಪದ್ಧತಿ ರೂಢಿಯಲ್ಲಿದೆ. ಅಮೆರಿಕ ಬೆಂಬಲಿತ ಮಿತ್ರ ಪಡೆಗಳು ಐಸಿಸ್ ಪ್ರಾಬಲ್ಯದ ಪ್ರದೇಶಗಳ ಮೇಲೆ ದಾಳಿ ನಡೆಸಿ ಮೇಲುಗೈ ಸಾಧಿಸಿದ ಹಿನ್ನಲೆಯಲ್ಲಿ ಖುಷಿಯಿಂದ ಯುವತಿಯೊಬ್ಬಳು, ಬುರ್ಖಾ ತೆಗೆದು ಹಾಕಿ ಕುಣಿದಾಡಿದ ಘಟನೆ ಸಿರಿಯಾದಲ್ಲಿ ನಡೆದಿದೆ. ಉತ್ತರ ಸಿರಿಯಾದ ಮನಬಿಜ್ ನಗರದಲ್ಲಿ ಅಮೆರಿಕ ಮಿತ್ರ ಪಡೆಗಳು, ಜಯ ಸಾಧಿಸಿದ ಹಿನ್ನಲೆಯಲ್ಲಿ ಸವಾದ್ ಹಮೀದಿ ಎಂಬ ಯುವತಿ ಬುರ್ಖಾ ತೆಗೆದು ಹಾಕಿ, ನನಗೆ ವಿಮೋಚನೆಯಾಗಿದೆ ಎಂದು ಕುಣಿದಾಡಿದ್ದಾಳೆ.

 

2014ರಿಂದ ಈ ಪ್ರದೇಶದಲ್ಲಿ ಐಸಿಸ್ ಉಗ್ರರು ಪ್ರಾಬಲ್ಯ ಮೆರೆದಿದ್ದು, ತಮ್ಮ ವಶಕ್ಕೆ ಪಡೆದ ಗ್ರಾಮ, ಊರುಗಳಲ್ಲಿ ತಮ್ಮದೇ ಆದ ನೀತಿ, ನಿಯಮ ಪಾಲಿಸುವಂತೆ ಕಡ್ಡಾಯಗೊಳಿಸಿದ್ದರು. ಹೆಣ್ಣುಮಕ್ಕಳು ಮುಖ ಮುಚ್ಚುವಂತೆ ಬುರ್ಖಾ ಧರಿಸಬೇಕೆಂಬುದು ಸೇರಿದಂತೆ ವಿವಿಧ ಕಟ್ಟುಪಾಡು ವಿಧಿಸಿದ್ದರು.

 

ಕಳೆದ 2 ವಾರಗಳಿಂದ ಈ ಪ್ರದೇಶದ ಮೇಲೆ ಅಮೆರಿಕ ಬೆಂಬಲಿತ ಸಿರಿಯಾ ರಾಜತಾಂತ್ರಿಕ ಪಡೆಗಳು ದಾಳಿ ಮಾಡಿ ಐಸಿಸ್ ಉಗ್ರರನ್ನು ಹಿಮ್ಮೆಟ್ಟಿಸಿದ್ದು, ಮರಳಿ ವಶಕ್ಕೆ ಈ ಪ್ರದೇಶವನ್ನು ಪಡೆದುಕೊಂಡಿವೆ. ಈ ಪಡೆಗಳು ಕಾರ್ಯಾಚರಣೆಯಲ್ಲಿ ಮೇಲುಗೈ ಸಾಧಿಸಿದ ಹಿನ್ನಲೆಯಲ್ಲಿ ಸವಾದ್ ಹಮೀದ್ ಖುಷಿಯಿಂದ ಬುರ್ಖಾ ತೆಗೆದು ಸಂಭ್ರಮಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...