alex Certify
ಕನ್ನಡ ದುನಿಯಾ       Mobile App
       

Kannada Duniya

ಸುರಂಗದಲ್ಲಿ ಅಡಗಿಕೊಂಡು ಐಸಿಸ್ ಉಗ್ರರ ಅಟ್ಟಹಾಸ

suranga

ಮೊಸುಲ್: ವಿಶ್ವದ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆಯಾಗಿರುವ, ಐಸಿಸ್ ಸದೆ ಬಡಿಯುವ ನಿಟ್ಟಿನಲ್ಲಿ ಇರಾಕ್ ಸೇನೆ ಕಾರ್ಯಾಚರಣೆ ಮುಂದುವರೆಸಿದೆ.

ಆದರೆ, ಐಸಿಸ್ ಉಗ್ರರನ್ನು ಸದೆ ಬಡಿಯುವ ಕಾರ್ಯಾಚರಣೆಗೆ ಹಿನ್ನಡೆಯಾಗುತ್ತಿದೆ. ತಮ್ಮ ವಶದಲ್ಲಿದ್ದ ಮೊಸುಲ್ ನಗರದಲ್ಲಿ ಉಗ್ರರು ಹಲವಾರು ಅಡಗು ತಾಣಗಳನ್ನು ನಿರ್ಮಿಸಿಕೊಂಡಿದ್ದಾರೆ. ನಗರದಲ್ಲಿ ಹತ್ತಾರು ಸುರಂಗಗಳನ್ನು ನಿರ್ಮಿಸಿಕೊಂಡಿದ್ದು, ಇಲ್ಲಿಂದಲೇ ಸೇನೆಯ ಮೇಲೆ ದಾಳಿ ಮಾಡುತ್ತಿದ್ದಾರೆ. ಉಗ್ರರು ಬೃಹತ್ ಯಂತ್ರಗಳನ್ನು ಬಳಸಿ ಮೊಸುಲ್ ನಲ್ಲಿ ಸುರಂಗಗಳನ್ನು ನಿರ್ಮಿಸಿಕೊಂಡಿದ್ದಾರೆ.

ಮೊಸುಲ್ ನಗರದಲ್ಲಿ ಉಗ್ರರು ತಮಗೆ ಸುರಕ್ಷಿತ ತಾಣಗಳಾಗಿ ಸುರಂಗಗಳನ್ನು ನಿರ್ಮಿಸಿಕೊಂಡಿದ್ದಾರೆ. ರಸ್ತೆ, ಕಟ್ಟಡಗಳಲ್ಲಿಯೂ ಸುರಂಗಗಳನ್ನು ಬೃಹತ್ ಯಂತ್ರ ಬಳಸಿ ನಿರ್ಮಿಸಲಾಗಿದೆ.

ಈ ಸುರಂಗಗಳ ಒಳಗೆ ಅವಿತುಕೊಂಡಿರುವ ಉಗ್ರರು, ಇರಾಕ್ ಸೇನೆ ಮೇಲೆ ದಿಢೀರ್ ದಾಳಿ ನಡೆಸಿ, ಮತ್ತೆ ಸುರಂಗದೊಳಗೆ ಅವಿತುಕೊಳ್ಳುತ್ತಾರೆ. ಇಂತಹ ಸುರಂಗಗಳನ್ನು ಪತ್ತೆ ಹಚ್ಚಿ ಉಗ್ರರನ್ನು ಸದೆ ಬಡಿಯಲಾಗುತ್ತಿದೆ ಎಂದು ಇರಾಕ್ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...