alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಸ್ತುವಿನೊಳಗೆ ಸಿಕ್ತು 13 ವರ್ಷದ ಹಿಂದೆ ಕಳೆದಿದ್ದ ಉಂಗುರ

ಅದೃಷ್ಟದ ಬಗ್ಗೆ ನಂಬಿಕೆಯಿಲ್ಲದವರು ಈ ಸುದ್ದಿ ಓದಿದ ನಂತ್ರ ಅದೃಷ್ಟವನ್ನು ನಂಬಲು ಶುರುಮಾಡಬಹುದು. ಯಾಕೆಂದ್ರೆ 13 ವರ್ಷಗಳ ಹಿಂದೆ ಕಳೆದು ಹೋದ ಅಮೂಲ್ಯ ವಸ್ತುವೊಂದು ವಿಚಿತ್ರವಾಗಿ ಸಿಕ್ಕಿದೆ. ಈ ವಿಷ್ಯ ಕೇಳಿ ಜನರು ಆಶ್ಚರ್ಯಕ್ಕೊಳಗಾಗಿದ್ದಾರೆ.

2004 ರಲ್ಲಿ ಮಹಿಳೆ ಮನೆ ಉದ್ಯಾನವನದಲ್ಲಿ ವಜ್ರದ ಉಂಗುರ ಕಳೆದುಕೊಂಡಿದ್ದಳು. ಅದ್ರ ಆಸೆ ಕೂಡ ಬಿಟ್ಟಿದ್ದಳು. ಆದ್ರೆ 13 ವರ್ಷಗಳ ನಂತ್ರ ಉಂಗುರ ಕ್ಯಾರೆಟ್ ಜೊತೆ ಸಿಕ್ಕಿದೆ. ಇದನ್ನು ನೋಡಿದ ಮಹಿಳೆ ಖುಷಿಯಿಂದ ಕುಣಿದಾಡಿದ್ದಾಳೆ.

ಘಟನೆ ಕೆನಡಾದ ಆಲ್ಬರ್ಟ್ ನಲ್ಲಿ ನಡೆದಿದೆ. ಮೇರಿ ಗ್ರಾಮ್ಸ್ ಎಂಬಾಕೆ ತೋಟದಲ್ಲಿ ಉಂಗುರ ಕಳೆದುಕೊಂಡಿದ್ದಳು. ಈಗ ಕ್ಯಾರೆಟ್ ಗೆ ಸಿಲುಕಿಕೊಂಡು ಉಂಗುರ ಮಹಿಳೆ ಕೈಗೆ ವಾಪಸ್ ಸಿಕ್ಕಿದೆ. ಉಂಗುರು ಕಳೆದು ಹೋದ ಬಗ್ಗೆ ಮಹಿಳೆ ತನ್ನ ಪತಿಗೂ ಹೇಳಿರಲಿಲ್ಲ. ಆದ್ರೆ ಮಗನಿಗೆ ಗೊತ್ತಿತ್ತು ಎನ್ನಲಾಗಿದೆ.

ಉಂಗುರದ ಆಸೆ ಬಿಟ್ಟಿದ್ದ ಮಹಿಳೆ ಅದಕ್ಕೆ ಹೋಲುವ ಉಂಗುರವನ್ನು ಖರೀದಿ ಮಾಡಿದ್ದಳು. ಹಿಂದಿನ ವರ್ಷ ಆಗಸ್ಟ್ ನಲ್ಲಿ ಈ ಅದ್ಭುತ ನಡೆದಿದೆ. ಸೊಸೆಗೆ ಕ್ಯಾರೆಟ್ ತಿನ್ನುವ ಬಯಕೆಯಾಗಿದೆ. ತೋಟದಲ್ಲಿ ಬೆಳೆದಿದ್ದ ಕ್ಯಾರೆಟ್ ಕಿತ್ತು ತಂದಿದ್ದಾಳೆ. ಮಣ್ಣಿನಿಂದಾಗಿ ಕ್ಯಾರೆಟ್ ನಲ್ಲಿದ್ದ ಉಂಗುರ ಕಾಣಲಿಲ್ಲ. ಆದ್ರೆ ನೀರಿನಲ್ಲಿ ತೊಳೆದಾಗ ಉಂಗುರ ಕಾಣಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...