alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪನನ್ನು ಹುಡುಕಲು ಹೊರಟವನಿಗೆ ಆತ ಸಿಕ್ಕಿದ್ದೇಗೆ…?

ನಾಥನ್ ಬೂಸ್‌ಗೆ 23 ವರ್ಷವಾಗುವ ತನಕ ಜನ್ಮದಾತನ ಬಗ್ಗೆ ಅಷ್ಟೇನೂ ಕುತೂಹಲವಿರಲಿಲ್ಲ. ಆದರೆ ಅದೊಂದು ದಿನ ದತ್ತು ಪಡೆದ ಅಪ್ಪ, ನೀನು ಟ್ರಕ್ ಚಾಲಕನ ಕೆಲಸ ಮಾಡು, ನಿನಗೆ ಜನ್ಮ ನೀಡಿದ ಅಪ್ಪ ಕೂಡಾ ಟ್ರಕ್ ಡ್ರೈವರ್ ಎಂದಾಗ ಇವನಿಗೆ ಕುತೂಹಲ ಮೂಡಿತು. ಜನ್ಮದಾತ ಅಪ್ಪನನ್ನು ಭೇಟಿಯಾಗಬೇಕು, ನೋಡಬೇಕು ಎಂಬ ಆಸೆಯಾಯಿತು.

ರಸ್ತೆಯಲ್ಲೆಲ್ಲಾದರೂ ಸಿಗಬಹುದಾ? ಟ್ರಕ್ ನಿಲ್ದಾಣಗಳಲ್ಲಿ ಕಾಣಬಹುದಾ ಅಂತೆಲ್ಲಾ ಮನಸ್ಸಿನೊಳಗೆ ಆಲೋಚನೆಗಳು ಬರತೊಡಗಿದವು. ಆದರೆ ಆತನ ಹೆಸರೇ ಗೊತ್ತಿರಲಿಲ್ಲ.

2016ರ ಜುಲೈನಲ್ಲಿ ಅಮೆರಿಕದ ವಿಸ್ಕಾನ್ಸಿನ್ ನ ರಾಕ್ ಸಾಲಿಡ್ ಟ್ರಾನ್ಸ್ ಪೋರ್ಟ್ ಎಂಬ ಕಂಪನಿಗೆ ಬೂಸ್ ಸೇರಿಕೊಂಡ. ಅಲ್ಲಿ ಇನ್ನೊಬ್ಬ ಟ್ರಕ್ ಚಾಲಕ ರಾಬರ್ಟ್ ಡೆಗರೋ ಎಂಬಾತನ ಪರಿಚಯವಾಯಿತು. ಆತ 2015ರ ನವೆಂಬರ್‌ನಲ್ಲಿ ಈ ಕಂಪನಿ ಸೇರಿದ್ದ. ರಾಬರ್ಟ್‌ಗೆ 55 ವರ್ಷ, ಟ್ಯಾಟೂ ಹಾಕ್ಕೊಂಡಿದ್ದ, ಉದ್ದ ಮೀಸೆಯಿತ್ತು, ಕಿವಿ ಚುಚ್ಚಿಕೊಂಡಿದ್ದ. ಇವರಿಬ್ಬರ ಮಧ್ಯೆ ಸ್ನೇಹ ಬೆಳೆಯಿತು. ಫೇಸ್‌ಬುಕ್‌ನಲ್ಲಿ ಇಬ್ಬರೂ ಜೋಕ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಇದನ್ನು ಬೂಸ್‌ನ ತಾಯಿ ಗಮನಿಸತೊಡಗಿದಳು.

ರಾಬರ್ಟ್ ಡೆಗರೋ ಹೆಸರು ಆಕೆಗೆ ಪರಿಚಿತವಾಗಿತ್ತು. ಆದರೆ ಫೇಸ್‌ಬುಕ್‌ನಲ್ಲಿ ಮಗನೊಂದಿಗೆ ಹರಟುವ ವ್ಯಕ್ತಿ ಆತನ ಜನ್ಮದಾತ ತಂದೆಯೇ ಎಂಬುದನ್ನು ನಂಬಲು ಆಕೆಗೂ ಸಾಧ್ಯವಾಗಲಿಲ್ಲ. ಆದರೂ ಒಂದು ದಿನ ಮಗ ಬೂಸ್‌ನನ್ನು ಪಕ್ಕದಲ್ಲಿ ಕುಳ್ಳಿರಿಸಿ ಈತನೇ ನಿನಗೆ ಜನ್ಮ ನೀಡಿದವ ಎಂದು ರಾಬರ್ಟ್‌ನ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ತೋರಿಸಿದಳು. ಮರುಕ್ಷಣವೇ ಬೂಸ್, ಓಹ್ ಆತ ನನ್ನೊಂದಿಗೆ ಕೆಲಸ ಮಾಡುವ ವ್ಯಕ್ತಿ ಎಂದು ಉದ್ಘರಿಸಿದ. ಕೊನೆಗೆ ಅಪ್ಪ- ಮಗನ ಮಿಲನವಾಯಿತು. ದತ್ತು ನೀಡಿದ ವೃತ್ತಾಂತವನ್ನು ಅಪ್ಪ ರಾಬರ್ಟ್ ಮಗನಿಗೆ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...