alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಪೊಲೀಸ್ ಅಧಿಕಾರಿ ಮಾಡಿರುವ ಮಾನವೀಯ ಕಾರ್ಯ

ಕ್ಯಾಲಿಫೋರ್ನಿಯಾದ ಪೊಲೀಸ್ ಅಧಿಕಾರಿಯೊಬ್ಬರು ಇತ್ತೀಚೆಗೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ನಿರಾಶ್ರಿತ ಮಹಿಳೆಯೊಬ್ಬರ ಹೆಣ್ಣು ಮಗುವೊಂದನ್ನು ದತ್ತು ತೆಗೆದುಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಜೆಸ್ಸಿ ವೈಟನ್ ಎಂಬ ಪೊಲೀಸ್ ಅಧಿಕಾರಿಯ ಬಾಳಲ್ಲಿ ಈ ರೀತಿಯಲ್ಲು ಹೆಣ್ಣು ಮಗುವಿನ ಪ್ರವೇಶ ಆಗುತ್ತೆ ಅಂತ ಅವರು ಅಂದುಕೊಂಡಿರಲಿಲ್ಲವಂತೆ.

ಜೆಸ್ಸಿ ಕಳೆದ ವರ್ಷ ಆಗಸ್ಟ್ ನಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದ ವೇಳೆ ಮಾದಕ ವಸ್ತು ಸೇವನೆ ಚಟದಿಂದ ಹೊರಬರಲಾರದೆ ನರಳುತ್ತಿದ್ದ ಮಹಿಳೆಯೊಬ್ಬರಿಗೆ ಸಹಾಯ ಮಾಡಿದ್ದರು. ಫೇಸ್ಬುಕ್ ಮೂಲಕ ಆ ಮಹಿಳೆ ತನ್ನ ಕಷ್ಟಗಳನ್ನು ಹೊರಹಾಕಿದ್ದಳು. ಇನ್ನೂ ಹೊಟ್ಟೆಯಲ್ಲಿರುವ ಮಗುವಿಗೆ ಒಂದು ಮನೆ ಮತ್ತು ಕುಟುಂಬ ಬೇಕಾಗಿದೆ ಅಂತ ಫೇಸ್ಬುಕ್ ಪೋಸ್ಟ್ ಒಂದನ್ನು ಹಾಕಿದ್ದಳು. ಈ ಪೋಸ್ಟ್ ನೋಡಿದ ಜೆಸ್ಸಿ ತನ್ನ ಪತ್ನಿ ಆಶ್ಲೆ ಜೊತೆ ಆ ತೆರಳಿ ಆ ಮಹಿಳೆಯೊಂದಿಗೆ ಮಾತುಕತೆ ನಡೆಸಿದ್ದರು.

ಈ ವರ್ಷ ಫೆಬ್ರವರಿಯಲ್ಲಿ ಆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿರೋದು ತಿಳಿದು ಬಂತು. ಆನಂತರದಲ್ಲಿ ಮಗುವನ್ನು ದತ್ತು ಸ್ವೀಕರಿಸುವ ಕಾನೂನು ಪ್ರಕ್ರಿಯೆಯನ್ನ ಜೆಸ್ಸಿ ಆರಂಭಿಸಿದರು. ಆಗಸ್ಟ್ ಅಂತ್ಯದಲ್ಲಿ ಅವರು ಆರು ತಿಂಗಳ ಹೆಣ್ಣು ಮಗುವನ್ನು ಕಾನೂನಿನ ಮೂಲಕ ದತ್ತು ಪಡೆದಿದ್ದಾರೆ. ಈ ಖುಷಿಯನ್ನ ಜೆಸ್ಸಿ ಫೇಸ್ಬುಕ್ ಮೂಲಕ ಹಂಚಿಕೊಂಡಿದ್ದಾರೆ.

ಈಗಾಗ್ಲೇ ತಮ್ಮ ಕುಟುಂಬದಲ್ಲಿ ಮೂವರು ಹೆಣ್ಣು ಮಕ್ಕಳ ತಂದೆ ಆಗಿರುವ ಜೆಸ್ಸಿ ಮತ್ತೊಂದು ಹೆಣ್ಣು ಮಗುವಿನ ಪೋಷಣೆಯ ಜವಾಬ್ದಾರಿ ತೆಗೆದುಕೊಂಡಿರೋದು ಗ್ರೇಟ್ ಅಂತಿದ್ದಾರೆ ನೆಟ್ಟಿಗರು. ಇದಕ್ಕಿಂತ ಹೆಣ್ಣು ಮಗುವಿಗೆ ಉತ್ತಮ ಮನೆ ಸಿಕ್ತಿರಲಿಲ್ಲ ಅಂತ ಅನೇಕರು ಕಾಮೆಂಟ್ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...